ರಾಮನಗರ : ವಿವಿಧ ಅಭಿವೃದ್ಧಿ ಕಾರ್ಯದ ಉದ್ಘಾಟನೆಗೆ ಇಂದು ರಾಮನಗರಕ್ಕೆ ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಡಿ.ಕೆ ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.
ಅಷ್ಟೇ ಅಲ್ಲ ಡಿ.ಕೆ ಸುರೇಶ್ ಬೆಂಬಲಿಗರು, ಮೈಕ್ ಕಿತ್ತು ಅಶ್ವತ್ಥ್ ನಾರಾಯಣ್ ಮೇಲೆ ಹಲ್ಲೆಗೆ ಮುಂದಾದ ಘಟನೆ ಕೂಡ ನಡೆದಿದೆ.
ಇದಾದ ಬಳಿಕ ಸಂಸದ ಡಿಕೆ ಸುರೇಶ ಇಂದು ನಡೆದ ಪ್ರಮಾದಕ್ಕೆ ನಾನು ಸಿಎಂ ರಲ್ಲಿ ಕ್ಷಮೆ ಕೇಳುತ್ತೇನೆ ಅದು ಕೇವಲ ಸಿಎಂ ಅವರಿಗೆ ಮಾತ್ರ. ಎಂದಿದ್ದಾರೆ ಈ ಮೂಲಕ ಸಚಿವ ಅಶ್ವತ್ಥ್ ನಾರಾಯಣ ಅವರೊಂದಿಗಿನ ಅಸಮಾಧಾನ ಇನ್ನು ಶಮನವಾಗಿಲ್ಲ ಎನ್ನುವುದನ್ನು ಖಾತರಿ ಪಡಿಸಿದ್ದಾರೆ.
PublicNext
03/01/2022 08:03 pm