ಮೈಸೂರು:ರಾಮನಗರ ಜಿಲ್ಲೆ ಮಾಡಿದವನು ನಾನು. ಜಿಲ್ಲೆ ಅಭಿವೃದ್ಧಿ ಮಾಡಿದವನು ನಾನು ಇಲ್ಲಿದ್ದೀನಿ. ಆದರೆ ಡಿಕೆ ಸುರೇಶ್ ಮತ್ತು ಸಚಿವ ಅಶ್ವತ್ಥ ನಾರಾಯಣ ವೇದಿಕೆ ಮೇಲೆ ಕಿತ್ತಾಡಿದ್ದಾರೆ ಎಂದೇ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇ ನಾನು. 2006 ರಲ್ಲಿ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಅನುಮೋದನೆ ಮಾಡಿದ್ದೇನೆ. 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ಆದರೆ
ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ರು ಎಂದೇ ಬೇಸರಪಟ್ಟುಕೊಂಡಿದ್ದಾರೆ ಕುಮಾರಸ್ವಾಮಿ.
ಬಿಜೆಪಿ 8 ವರ್ಷ ಅಧಿಕಾರ ಮಾಡಿದೆ. ಕಾಂಗ್ರೆಸ್ 5 ವರ್ಷ ಆಳ್ವಿಕೆ ಮಾಡಿದೆ.ಆದರೆ ಎರಡೂ ಸರ್ಕಾರ ಮಾಡಿದ್ದಾರೇನು ಅಂತಲೇ ಕೇಳಿದ್ದಾರೆ ಕುಮಾರಸ್ವಾಮಿ.
PublicNext
03/01/2022 07:03 pm