ಗದಗ: ರೈತ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕಿನ ಕರವೇ ನಾರಾಯಣಗೌಡ ಬಣ ಹಾಗೂ ರೈತಪರ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯು ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬಜಾರ್ ರಸ್ತೆ ಮೂಲಕ ಬಸ್ ಸ್ಟಾಂಡ್, ಶಿಗ್ಲಿ ಕ್ರಾಸ್ ನಲ್ಲಿ ಕೆಲ ಗಂಟೆಗಳ ಕಾಲ ಹೋರಾಟ ತೀವ್ರಗತಿಯಲ್ಲಿ ನಡೆಯಿತು.
ಇದೇ ವೇಳೆಯಲ್ಲಿ ಅಧಿಕಾರಿಗಳಿಗೆ ಕರವೇ ಹಾಗೂ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ಹೋರಾಟಗಾರರ ಬೇಡಿಕಿಗೆ ಅಧಿಕಾರಿಗಳು 8 ದಿನದ ಸಮಯ ತೆಗೆದುಕೊಂಡರು ಪ್ರತಿಭಟನೆಯಲ್ಲಿ ಚಕ್ಕಡಿ ಹಾಗೂ ಎತ್ತುಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
PublicNext
03/01/2022 06:11 pm