ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕೊರೊನಾ ಸೋಂಕು ತಗುಲಿ ಮೃತಪಟ್ಟ ಕುಟುಂಬದವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುತ್ತಿದೆ. ನಾನು ನಿಮಗೆ 10 ಸಾವಿರ ವೈಯಕ್ತಿಕ ಹಣ ನೀಡುತ್ತಿದ್ದೇನೆ. ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ ಘಟನೆ ನಡೆದಿದೆ.
ಮನೆ ಬಾಗಿಲಿಗೆ ಕೋವಿಡ್ ಸಂತ್ರಸ್ಥರನ್ನು ಕರೆಸಿಕೊಂಡು ಆಣೆ ಪ್ರಮಾಣ ಮಾಡಿಸಿದ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೊವಿಡ್ ಪರಿಹಾರ ಹಣ ನೀಡುವಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಣೆ ಪ್ರಮಾಣ ಮಾಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ತಾಕೀತು ಮಾಡಿದ್ದಾರೆ.
PublicNext
02/01/2022 02:39 pm