ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿಗೆ ಬೇಕಿದ್ರೆ ಕ್ರೈಸ್ತ ಅಥವಾ ಇಸ್ಲಾಂಗೆ ಕನ್ವರ್ಟ್ ಆಗಲಿ: ಈಶ್ವರಪ್ಪ ಕಿಡಿ

ಶಿವಮೊಗ್ಗ: ಸರ್ಕಾರದ ಹಿಡಿತದಲ್ಲಿರುವ ರಾಜ್ಯದ ದೇವಾಲಯಗಳನ್ನು ಮುಕ್ತಗೊಳಿಸುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್ ಈಶ್ವರಪ್ಪ ಡಿಕೆಶಿ ಮೇಲೆ ಕಿಡಿ ಕಾರಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಕಾಂಗ್ರೆಸ್‌ನವರಿಗೆ ಯಾಕೆ ಹೊಟ್ಟೆ ಉರಿ? ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ನಮ್ಮದು ಬಹಿರಂಗ ಅಜೆಂಡಾ. ದೇವಸ್ಥಾನಕ್ಕೆ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಏನೂ ಮುಚ್ಚುಮರೆ ಇಲ್ಲ. ಇದನ್ನು ವಿರೋಧಿಸುವ ಡಿ.ಕೆ ಶಿವಕುಮಾರ್ ಮುಸ್ಲಿಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲಿ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

01/01/2022 10:49 pm

Cinque Terre

59.95 K

Cinque Terre

3