ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಸಭೆಯಲ್ಲಿ ಎಸ್‌ಡಿಪಿಐ ಕೇವಲ ಒಂದು ಸ್ಥಾನ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಎಸ್‌ಡಿಪಿಐ ಸ್ಥಳೀಯ ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಒಂದು ಸ್ಥಾನ ಗೆದ್ದು ಸಿ.ಟಿ.ರವಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಚಿಕ್ಕಮಗಳೂರನ್ನ ಮತ್ತೊಂದು ಅಯೋಧ್ಯೆ ಮಾಡಲು ನಾವು ಬಿಡಲ್ಲ. ಈ ಬಾರಿ ಒಂದು ಸ್ಥಾನ ಗೆದ್ದಿದ್ದೇವೆ. ಮುಂದಿನ ಬಾರಿ ನಗರಸಭೆಯ ಅಧಿಕಾರ ಹಿಡಿಯುತ್ತೇವೆ. ಎಸ್‌ಡಿಪಿಐ ಅಲೆ ಈಗ ಎಲ್ಲ ಕಡೆ ಶುರುವಾಗಿದೆ. ಮುಂದಿನ ಬಾರಿ ಜಿಲ್ಲೆಯಿಂದ ಶಾಸಕ ಸ್ಥಾನವನ್ನೂ ಗೆಲ್ಲುತ್ತೇವೆ
ಚಿಕ್ಕಮಗಳೂರು ನಗರಸಭೆಯ ವಾರ್ಡ್ ನಂಬರ್ 23ರಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಮಂಜುಳಾ ಶ್ರೀನಿವಾಸ್ ಗೆಲುವು ದಾಖಲಿಸಿದ್ದಾರೆ. ಈ ಗೆಲುವಿನ ಮೂಲಕ ನಾವು ಸಿ.ಟಿ ರವಿಗೆ ಮೊದಲ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಸ್ಥಳೀಯ ಎಸ್‌ಡಿಪಿಐ ಮುಖಂಡ ಹೇಳಿದ್ದಾರೆ.
PublicNext
30/12/2021 10:52 pm