ಹಾವೇರಿ:ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಪುರಸಭೆಯಲ್ಲಿ ಬಿಜೆಪಿಗೆ ಹಿನ್ನೆಡೆ ಆಗಿದೆ.ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಶಿಗ್ಗಾವಿ ತಾಲೂಕಿನ ಪುರಸಭೆ ಮತ್ತು ಪಟ್ಟಣ ಪಂಚಾಯಿಯಲ್ಲೂ ಬಿಜೆಪಿಗೆ ಸೋಲಾಗಿದೆ. ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳಲ್ಲಿ 11 ಸ್ಥಾನಗಳನ್ನ ಕಾಂಗ್ರೆಸ್ ಗೆದ್ದುಕೊಂಡಿದೆ.ಆದರೆ ಬಿಜೆಪಿ ಕೇವಲ 6 ಸ್ಥಾನಗಳನ್ನ ಗೆದ್ದುಕೊಳ್ಳಲು ಸಾಧ್ಯವಾಗಿದೆ.
ಒಟ್ಟು 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 14 ಸ್ಥಾನಗಳನ್ನ ಗೆದದ್ದು ಅಧಿಕಾರದ ಗದ್ದಿಗೇ ಏರಿದೆ. ಹಾನಗಲ್ ಪುರ ಸಭೆಯ 19ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಮೀರ್ ಅಹ್ಮದ್ ಶೇಖ್ ಗೆಲುವ ಸಾಧಿಸಿದ್ದಾರೆ.
ಇದೇನೋ ಹಾವೇರಿಯ ಕಥೆ ಆಯಿತು. ಆದರೆ ಶ್ರೀರಾಮುಲು ಪ್ರನಿಧಿಸುವ ಚಿತ್ರದುರ್ಗದ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲೂ ಬಿಜೆಪಿಗೆ ಹೀನಾಯ ಸೋಲಾಗಿದೆ.ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಮೇಲುಗೈ ಸಾಧಿಸಿದೆ.
ಇಲ್ಲಿಯ ಒಟ್ಟು 16 ಸ್ಥಾನಗಳಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನ ಗೆದ್ದುಕೊಂಡಿದೆ.ಬಿಜೆಪಿಗೆ 2 ಸ್ಥಾನಗಳನ್ನ ಮಾತ್ರ ಗೆಲ್ಲೋದಕ್ಕೆ ಸಾಧ್ಯವಾಗಿದೆ. ಪಕ್ಷೇತರ 3 ಸ್ಥಾನ ಗೆದ್ದುಕೊಂಡಿರೋದೇ ಇಲ್ಲಿ ವಿಶೇಷ.
PublicNext
30/12/2021 03:53 pm