ಬೆಂಗಳೂರು: ಜೆಡಿಎಸ್ ಹಾಗೂ ಬಿಜೆಪಿ ನಾಯಕರು ದಿಲ್ಲಿಯಲ್ಲಿ ಕುಳಿತು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಈ ಷಡ್ಯಂತ್ರದ ರೂಪುರೇಷೆಯನ್ನು ವ್ಯವಸ್ಥಿತವಾಗಿ ಹೆಣೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕುಮಾರಸ್ವಾಮಿ ತಮ್ಮ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ನನ್ನ ವಿರುದ್ಧ ಏನೇನು ಮಾಡಿದ್ದಾರೆಂಬುದು ನನಗೆ ಗೊತ್ತು. ಎರಡು ಪಕ್ಷಗಳ ನಾಯಕರು ದೆಹಲಿಯಲ್ಲಿ ಸೇರಿ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿದ್ದಾರೆ. ಸಮಯ ಬಂದಾಗ ಇದರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಮೇಕೆದಾಟು ಜಾರಿಗಾಗಿ ಕಾಂಗ್ರೆಸ್ ಒತ್ತಾಯಿಸಿದೆ. ಇದು ನನ್ನ ಸ್ವಂತ ಭೂಮಿಯಲ್ಲಿ ವ್ಯವಸಾಯ ಮಾಡೋದಕ್ಕಲ್ಲ. ಕುಮಾರಸ್ವಾಮಿ ಜತೆ ಸ್ಪರ್ಧೆ ಮಾಡುವ ತಾಕತ್ತು ನನ್ನೊಳಗಿಲ್ಲ. ನಾನು ಥಿಯೇಟರ್ ಮಾಲೀಕನಾದ ನನಗೆ ಅಭಿನಯ ಮಾಡೋದಕ್ಕೆ ಬರಲ್ಲ. ನಾನು ಪಂಚೆ ಕಟ್ಟಿ ನಾಟಕ ಮಾಡ್ತಿದ್ದೇನೆಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ನಾನು ಪಂಚೆ ಧರಿಸಿದ್ದೆ. ಈಗಲೂ ಕೆಲವೊಮ್ಮೆ ಧರಿಸುತ್ತೇನೆ ಎಂದು ಡಿಕೆಶಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
PublicNext
29/12/2021 08:35 pm