ಬೆಂಗಳೂರು:ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಇದ್ರೆ ಅತ್ತ ಕಡೆಗೆ ಯಡಿಯೂರಪ್ಪ ದುಬೈ ಪ್ರವಾಸದಲ್ಲಿದ್ದಾರೆ. ಇದು ಅತಿ ಹೆಚ್ಚು ಚರ್ಚೆಗೂ ಕಾರಣ ಆಗಿದೆ. ಹೀಗೇಕೆ ಅನ್ನೋ ಪ್ರಶ್ನೆನೂ ಇದೆ.
ಕರ್ನಾಟಕದಲ್ಲಿ ಬಿಜೆಪಿ ಭದ್ರನೆಲೆ ಕಂಡುಕೊಳ್ಳುವಲ್ಲಿ ಯಡಿಯೂರಪ್ಪ ಸಾಕಷ್ಟು ಶ್ರಮಪಟ್ಟಿದ್ದಾರೆ. ಆದರೆ ಈಗ ನೋಡಿದರೆ, ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಯಡಿಯೂರಪ್ಪ ಅವರೇ ಇಲ್ಲ.ಹೀಗೆಕೆ ಅನ್ನೋ ಪ್ರಶ್ನೆಗೆ ಸದ್ಯ ಉತ್ತರ ವಿಲ್ಲ.
ಆದರೆ ಕುಟುಂಬ ಸಮೇತ ಪ್ರವಾಸ ಮಾಡ್ತಿರೋ ಯಡಿಯೂರಪ್ಪನವ್ರು ದುಬೈನ ಪ್ರಮುಖ ತಾಣಗಳನ್ನ ವೀಕ್ಷಿಸುತ್ತಿದ್ದಾರೆ. ಅಲ್ಲಿ ಕಂಡ ದುಬೈ ಎಕ್ಸಪೋ-2020 ಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಟ್ವಿಟರ್ ನಲ್ಲೂ ಅದರ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ.
ಜಾಗತಿಕ ಆಕರ್ಷಣೆಯಾಗಿ ಗಮನ ಸೆಳೆಯುತ್ತಿರುವ ದುಬೈ ಎಕ್ಸ್ ಪೋ - 2020 ಕ್ಕೆ ಇಂದು ಭೇಟಿ ನೀಡಲಾಯಿತು. 190ಕ್ಕೂ ಹೆಚ್ಚಿನ ದೇಶಗಳು ಪಾಲ್ಗೊಂಡಿರುವ ಈ ಪ್ರದರ್ಶನ ಮೇಳದಲ್ಲಿ ನಮ್ಮ ಭಾರತದ ಪೆವಿಲಿಯನ್ ಅತ್ಯದ್ಭುತವಾಗಿದ್ದು, 'ಮುಕ್ತ ವಾತಾವರಣ, ಅವಕಾಶಗಳು ಮತ್ತು ಬೆಳವಣಿಗೆ' ಎನ್ನುವ ಆಶಯ ಅತ್ಯಂತ ಸಮರ್ಥವಾಗಿ ಪ್ರತಿಬಿಂಬಿತವಾಗಿದೆ.
ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಹಾಗೂ ಮೊಮ್ಮಕ್ಕಳ ಜೊತೆಗೆ ಯಡಿಯೂರಪ್ಪ ಸದ್ಯ ದುಬೈನಲ್ಲಿಯೇ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ.
PublicNext
29/12/2021 07:31 am