ದೆಹಲಿ:ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ಮಾಡುವಾಗ ಧ್ವಜವೇ ಹರಿದು ಕೈ ಮೇಲೆ ಬಿದ್ದ ಘಟನೆ ಈಗ ನಡೆದಿದೆ.
ಪಕ್ಷದ 137 ನೇ ಸಂಸ್ಥಾಪನಾ ದಿನದಂದು ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಧ್ವಜಾರೋಹಣ ಮಾಡುತ್ತಿದ್ದರು. ಆದರೆ ಅದು ಸಾಧ್ಯವಾಗದೇ ಇದ್ದಾಗ ಅಲ್ಲಿದ್ದ ಕಾರ್ಯಕರ್ತ ಧ್ವಜಕ್ಕೆ ಕಟ್ಟಿದ ಹಗ್ಗವನ್ನ ಹಿಡಿದು ಜೋರಾಗಿಯೇ ಎಳೆದು ಬಿಡ್ತಾರೆ.
ಆಗ ಮೇಲಿದ್ದ ಧ್ವಜ ಕೆಳಗೆ ಸೋನಿಯಾ ಗಾಂಧಿ ಅವರ ಕೈ ಮೇಲೆಯೇ ಬಿದ್ದು ಬಿಡುತ್ತದೆ. ಅದೇ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ.
PublicNext
28/12/2021 12:37 pm