ಬೆಂಗಳೂರು: ಮತಾಂತರ ನಿಷೇಧ ವಿಧೇಯಕದ ಡ್ರಾಫ್ಟ್‌ಗೆ ನಾನು ಸಹಿ ಹಾಕಿದ್ದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ ಅದನ್ನೇ ಅಜೆಂಡಾ ಮಾಡಿಕೊಂಡಿದೆ. ಇದು ರಚೆನಯಾಗಿದ್ದು 2009ರಲ್ಲಿ ಆಗ ಯಡಿಯೂರಪ್ಪ ಅವರೇ ರಾಜ್ಯದ ಸಿಎಂ ಆಗಿದ್ದರು. ನಮ್ಮ ಅವಧಿಯಲ್ಲಿ ಈ ಡ್ರಾಫ್ಟ್ಗೆ ಸಹಿ ಹಾಕಿ ಇದನ್ನು ಅಧಿವೇಶನದಲ್ಲಿ ಚರ್ಚೆಗೆ ತನ್ನಿ ಎಂದಿದ್ದಷ್ಟೇ ಸತ್ಯ. ಆ ನಂತರ ಆಗಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್. ಆಂಜನೇಯ ಅವರಿಗೆ ಹೇಳಿ ಅದನ್ನು ಅಲ್ಲಿಗೆ ಕೈಬಿಡುವಂತೆ ಹೇಳಿದ್ದೆ. ಹೀಗಾಗಿ ಇದು ಸದನದವರೆಗೂ ಬಂದಿರಲಿಲ್ಲ. ಆದ್ರೆ ಈ ಎಲ್ಲ ವಾಸ್ತವವನ್ನು ಬಿಜೆಪಿಯವರು ಸದನದಲ್ಲಿ ಹೇಳಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು (ಕಾಂಗ್ರೆಸ್) ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ. ಒಂದು ಹುಡುಗ ಹುಡುಗಿ ಮದುವೆ ಆಗುವುದು ಮತಾಂತರನಾ..? ಲವ್ ಮಾಡಿ ಮದುವೆ ಆಗೋದ್ ಅವರ ಹಕ್ಕು. ಇವರು ತಂದಿರೋದ್ ಸಂವಿಧಾನದ ಬಾಹಿರ. ಇವರ ಉದ್ದೇಶ ವೋಟ್ ಪಡೆಯೋದ್ ಅಷ್ಟೆ. ಭಾವನಾತ್ಮಾಕ ವಿಷಯಗಳನ್ನ ಇಟ್ಕೊಂಡು ಜನರ ದಾರಿ ತಪ್ಪಿಸುತ್ತಾರೆ. ಜನರನ್ನ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಿರುದ್ಯೋಗ, ನೆರೆ, ಪರಿಹಾರ, ಮಹಿಳೆಯರ ಸಮಸ್ಯೆ ಇವೆಲ್ಲಾ ಬಿಟ್ಟು ಡೈವರ್ಟ್ ಮಾಡ್ತಾ ಇದ್ದಾರೆ. ಈ ಕಾಯ್ದೆ ಹಿಂದೆ ದುರುದ್ದೇಶ ಇದೆ ಎಂದು ಕಿಡಿಕಾರಿದರು.
PublicNext
27/12/2021 06:39 pm