ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೈಸ್ತ -ಮುಸ್ಲಿಂ ಘರ್ ವಾಪಸಿ ಹೇಳಿಕೆ: ಹಿಂಪಡೆದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಮುಸ್ಲಿಂ ಹಾಗೂ ಕ್ರೈಸ್ತರನ್ನ ಘರ್ ವಾಪಸಿ ಮಾಡದೇ ಬೇರೆ ದಾರಿಯೇ ಇಲ್ಲ ಅಂತಲೇ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಉಡುಪಿಯ ಕೃಷ್ಣಮಠದಲ್ಲಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಆದರೆ ಈಗ ಈ ಹೇಳಿಕೆಯನ್ನ ಹಿಂದೆ ಪಡೆದಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಉಡುಪಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಹಿಂದೂ ಪುನರುಜ್ಜೀವನ' ವಿಷಯದ ಮೇಲೆ ತೇಜಸ್ವಿ ಸೂರ್ಯ ಮಾತನಾಡಿದ್ದರು. ಆ ವೇಳೆನೆ ಮುಸ್ಲಿಂ ಮತ್ತು ಕ್ರೈಸ್ತರನ್ನ ಘರ್ ವಾಪಸಿ ಮಾಡಬೇಕು ಅಂತಲೇ ಹೇಳಿದ್ದರು. ಆದರೆ ಈ ಹೇಳಿಕೆ ಸಾಕಷ್ಟು ವಿವಾದವನ್ನ ಹುಟ್ಟುಹಾಕಿವೆ. ಆದ ಕಾರಣ ನಾನು ನನ್ನ ಈ ಹೇಳಿಕೆಯನ್ನ ಹಿಂದೆ ಪಡೆಯುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಸೋಷಿಲ್ ಮೀಡಿಯಾ ಮೂಲಕ ಈಗ ಹೇಳಿಕೊಂಡಿದ್ದಾರೆ.

Edited By :
PublicNext

PublicNext

27/12/2021 01:38 pm

Cinque Terre

37.15 K

Cinque Terre

6

ಸಂಬಂಧಿತ ಸುದ್ದಿ