ಬೆಂಗಳೂರು:ರಾಜ್ಯದಲ್ಲಿ ನಡೀತಿರೋ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಪಷ್ಟ ಸಂದೇಶ ನೀಡಲು ಅಖಾಡಕ್ಕಿಳಿಯಲಿದ್ದಾರೆ.
ನಾಳೆ ಡಿಸೆಂಬರ್-27 ಮತ್ತು 28 ಹುಬ್ಬಳ್ಳಿಯಲ್ಲಿ ನಡೆಯಲಿರೋ ಕಾರ್ಯಕಾರಣಿ ಸಭೆಯಲ್ಲಿ ಜೆಪಿ ನಡ್ಡಾ ಭಾಗಿ ಆಗುತ್ತಿದ್ದಾರೆ. ಈ ಮೊದಲು ಈ ಕಾರ್ಯಕಾಣಿಸಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತ್ರ ಭಾಗಿ ಆಗುತ್ತಿದ್ದಾರೆ ಅಂತಲೇ ಹೇಳಲಾಗುತ್ತಿತ್ತು.
ಆದರೆ ಈಗ ಈ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬರ್ತಿದ್ದಾರೆ. ಎದ್ದಿರೋ ನಾಯಕತ್ವದ ಗುಸು-ಗುಸುಗೆ ತೆರೆ ಎಳೆಯಲಿದ್ದಾರೆ ಅಂತಲೇ ಮೂಲಗಳು ಹೇಳ್ತಿವೆ.
PublicNext
27/12/2021 01:14 pm