ಶಾಮ್ಲಿ:ಉತ್ತರ ಪ್ರದೇಶದಲ್ಲಿ ಮುಂದಿನ ಅವಧಿಗೂ ಯೋಗಿ ಆದಿತ್ಯನಾಥ್ ಸರ್ಕಾರವೇ ಅಧಿಕಾರಕ್ಕೆ ಬಂದ್ರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯತ್ ರಾಜ್ಯ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿಕೆ ಕೊಟ್ಟಿದ್ದಾರೆ.
ಈಗಾಗಲೇ ರಾಹುಲ್ ಗಾಂಧಿ ಜನಿವಾರ ಧರಿಸಿದ್ದಾರೆ.ಅಖಿಲೇಶ್ ಯಾದವ್ ಹನುಮಾನ್ ಟೆಂಪಲ್‌ಗೆ ಹೋಗಿದ್ದಾರೆ. ಆ ಸಾಲಿಗೇನೆ ಓವೈಸಿ ಸೇರ್ತಾರೆ ಅಂತಲೂ ವ್ಯಂಗ್ಯವಾಡಿದ್ದಾರೆ ಭೂಪೇಂದ್ರ ಸಿಂಗ್.
ರಾಜ್ಯ ವಿಧಾನಪರಿಷ್ ಸದಸ್ಯರೂ ಆಗಿರೋ ಭೂಪೇಂದ್ರ ಸಿಂಗ್ ಚೌಧರಿ ಶಾಮ್ಲಿಯ ಯುವಜನರ ಸಮಾವೇಶದಲ್ಲಿ ಹೀಗೆ ಓವೈಸಿ ಬಗ್ಗೆ ಬಹಿರಂಗವಾಗಿಯೇ ಟೀಕೆ ಮಾಡಿದ್ದಾರೆ.
ಬಿಜೆಪಿ ಅಜೆಂಡಾಗಳಿಂದಲೇ ರಾಹುಲ್-ಅಖಿಲೇಶ್ ಬದಲಾಗಿರೋದು. ಹೀಗಿರೋವಾಗ ಓವೈಸಿ ಕೂಡ ಬದಲಾಗುತ್ತಾರೆ. ನಾನು ಹೇಳಿರೋದು ಸತ್ಯ. ಅದು ನಿಜವಾಗಲೂ ಆಗುತ್ತದೆ. ರಾಮನ ಅಸ್ತಿತ್ವವೇ ಇಲ್ಲ ಅಂದವರೂ ಈಗ ಜನಿವರ ಧರಿಸುತ್ತಿದ್ದಾರೆ ಅಂತಲೂ ಚುಚ್ಚಿದ್ದಾರೆ ಭೂಪೇಂದ್ರ ಸಿಂಗರ್ ಚೌಧರಿ.
PublicNext
27/12/2021 11:06 am