ಬೀದರ್: ಕೇಂದ್ರ ಸಚಿವ ಭಗವಂತ ಖುಬಾಗೆ ಬೀದರ್ ರೈತರು ಘೇರಾವ್ ಹಾಕಲು ಪ್ರಯತ್ನಿಸಿದ ಘಟನೆ ಇಂದು ನಡೆದಿದೆ.
ಇಲ್ಲಿಯ ರೈತರ ಜೊತೆಗಿನ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಭಗವಂತ್ ಖುಬಾ ಅವರಿಗೆ ರೈತರು ಘೇರಾವ್ ಹಾಕಲು ಮುಂದಾಗಿದ್ದರು.ಬೀದರ್ ಜಿಲ್ಲೆಗೆ ನಿಮ್ಮ ಕೊಡುಗೆ ಏನೂ ಅಂತಲೂ ಪ್ರಶ್ನಿಸಿದರು.
ಜಿಲ್ಲೆಯ ರೈತರಿಂದ ಅತಿ ಹೆಚ್ಚು ಬೆಳೆ ವಿಮೆ ಮಾಡಿಸಲಾಗಿದೆ. ಆದರೆ ಒಂದು ನಯಾ ಪೈಸೆನೂ ಪರಿಹಾರದ ಬಂದಿಲ್ಲ ಅಂತಲೇ ರೈತರು ದೂರಿದರು. ರೈತರನ್ನ ಲೂಟಿ ಮಾಡ್ತಿರೋ ವಿಮೆ ಕಂಪನಿಯ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಅಂತಲೂ ಸಚಿವರನ್ನ ರೈತರು ಪ್ರಶ್ನಿಸಿದರು.
ಆದರೆ ರೈತರ ಈ ಆಕ್ರೋಶಕ್ಕೆ ಸಚಿವ ಭಗವಂತ್ ಖುಬಾ ಉತ್ತರಿಸದೇ ಹಾಗೇ ಹೊರಟು ಹೋದರು.
PublicNext
26/12/2021 03:02 pm