ವಿಜಯಪುರ : ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಈಗ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದ ಆ ಒಂದು ಮಾತನ್ನ ಚಾಚೂ ತಪ್ಪದೇ ಪಾಲಿಸಿದ್ದಾರೆ. ಅವರು ಹೇಳಿದಂತೆ ಆಂಜನೇಯನ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಮಾಡುವ ಮೂಲಕ ಸಿಎಂ ಹೇಳಿರೋ ಆ ಕೆಲಸವನ್ನೂ ಮಾಡಿದ್ದಾರೆ. ಅದ್ಹಾಗೆ ಅದೇನೂ ಅಂತಿರೋ ಬನ್ನಿ, ಹೇಳ್ತೀವಿ.
ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜಿಗೌಡ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡಿದ್ದರು. ವಿಶೇಷವಾಗಿಯೇ ಬೆಳ್ಳಿ ಗದೆಯನ್ನೂ ಕೊಟ್ಟಿದ್ದರು. ಆದರೆ ಸಿಎಂ ಇದನ್ನ ವಿಜು ಗೌಡರಿಗೆ ಕೊಟ್ಟು ಆಂಜನೇಯನ ಟೆಂಪಲ್ ಗೆ ಕೊಟ್ಟು ಬಿಡಿ ಅಂತಲೇ ಹೇಳಿದ್ದರು.
ಅದೇ ಕೆಲಸವನ್ನೇ ವಿಜುಗೌಡ ಪಾಟೀಲ್ ಈಗ ಮಾಡಿದ್ದಾರೆ.ವಿಜಯಪುರ ನಗರದ ಮದಲಾ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಗದೆಯನ್ನೂ ದೇವಸ್ಥಾನಕ್ಕೆ ಕೊಟ್ಟಿದ್ದಾರೆ.
PublicNext
26/12/2021 11:28 am