ತುಮಕೂರು: ಮತಾಂತರಗೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸರ್ಕಾರದ ಮೀಸಲಾತಿ ಸೌಲಭ್ಯಗಳನ್ನ ಕಳೆದುಕೊಳ್ಳಲಿದ್ದಾರೆ. ಮತಾಂತರಗೊಂಡವರ ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ಶಾಲೆಯಲ್ಲೂ ಅದು ನೋಂದಣಿ ಆಗುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಸಮಯದಲ್ಲಿ ಈ ವಿಷಯ ಹೇಳಿದ್ದಾರೆ. ಇನ್ನು ಸರ್ಕಾರ ಇದೇ ಜನವರಿಯಲ್ಲಿ ನಡೆಯಲಿರೋ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ಮಂಡಿಸುತ್ತದೆ.ಬಲವಂತದಿಂದ ಮತಾಂತರ ಮಾಡುವುದನ್ನ ಈ ಮೂಲಕ ಸರ್ಕಾರ ತಡೆಯಲಿದೆ ಅಂತಲೂ ಮಾಧುಸ್ವಾಮಿ ವಿವರಿಸಿದ್ದಾರೆ.
PublicNext
26/12/2021 07:43 am