ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಗರಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ವಿಶ್ವನಾಥ ಶೀರಿ ಸ್ಪರ್ಧೆ:15ನೇ ವಾರ್ಡಿನಲ್ಲಿ ಸಂಚಲನ ಸೃಷ್ಟಿಸಲಿದೆ ಆಟೋ...!

ಗದಗ: ದಿಟ್ಟ ಹೋರಾಟದ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಜನನಾಯಕನಾಗಿ ಬೆಳೆದ ಅಭ್ಯರ್ಥಿ ಈಗ ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಡು ನುಡಿಗಾಗಿ ಜೀವ ಕೊಡಲು ಸಿದ್ಧವಾಗಿದ್ದ ವಿಶ್ವನಾಥ ಶೀರಿ ಜನರ ಸೇವೆಗೆ ಕಂಕಣಬದ್ಧರಾಗಿ ನಿಂತಿದ್ದಾರೆ. ಮಾಡಿರುವ ಜನಪರ ಕಾರ್ಯಗಳೇ ಶ್ರೀರಕ್ಷೆಯಾಗಿದೆ.

ಹೌದು.. ಸುಮಾರು ವರ್ಷಗಳಿಂದ ತಲೆದೋರಿದ ಸಮಸ್ಯೆಗಳಿಗೆ ಮುಕ್ತಿ‌ ನೀಡಿ. ಜನರನ್ನು ಸಮಸ್ಯೆಗಳ ಸುಳಿಯಿಂದ ಹೊರತರಲು ಯಾವುದೇ ಪಕ್ಷದ ಕಟ್ಟಪ್ಪಣೆಗೆ ಒಳಪಡದೆ ಸ್ವತಂತ್ರ ಅಭ್ಯರ್ಥಿಯಾಗಿ ವಿಶ್ವನಾಥ ಶೀರಿ ಆಟೋ ಗುರುತಿನ ಮೂಲಕ ಚುನಾವಣೆಗೆ ನಿಂತಿದ್ದಾರೆ. ಮತದಾರರಿಗೆ ಯಾವುದೇ ಆಮಿಷ ನೀಡದೇ, ಚುನಾವಣಾ ಖರ್ಚು- ವೆಚ್ಚಗಳಿಗೆ ಜನರಿಂದಲೇ ದಾನದ ರೂಪದಲ್ಲಿ ಹಣ ಪಡೆದು, ಮತಭಿಕ್ಷೆ ಕೇಳುತ್ತಿದ್ದಾರೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ಎದುರಿಸಿ ಗಮನ ಸೆಳೆಯುತ್ತಿರುವ ಈ ಜನನಾಯಕನಿಗೆ ಜನರೇ ಬೆಂಬಲ ನೀಡಿ ಚುನಾವಣೆಗೆ ನಿಲ್ಲಿಸಿದ್ದಾರೆ.

ಇನ್ನೂ ಸಾಕಷ್ಟು ಹೋರಾಟದಲ್ಲಿ ಭಾಗಿಯಾಗಿರುವ ವಿಶ್ವನಾಥ ಶೀರಿಯವರು ಉಡುಪಿ ಶ್ರೀ ಕೃಷ್ಣ ಮಠದ ಕನಕ ಕಿಂಡಿ ಕುರಿತು ವಿವಾದ ಸೃಷ್ಟಿಸಿದ್ದ ಸರಕಾರದ ವಿರುದ್ಧ ಚಳವಳಿಗೆ ಧುಮುಕಿದ್ದರು. ಅಲ್ಲದೇ ಬೆಂಗಳೂರು ಚಲೋ ಹೋರಾಟದಲ್ಲೂ ಪಾಲ್ಗೊಂಡಿದ್ದರು. ದಶಕಗಳ ಹಿಂದೆಯೇ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿದ್ದ ವಿಶ್ವನಾಥ ಶೀರಿ, ಕಾವೇರಿ ನದಿ ನೀರಿಗಾಗಿ ದೆಹಲಿ ಚಲೋ ಚಳುವಳಿಯಲ್ಲೂ ಭಾಗವಹಿಸಿದ್ದರು. ಕನ್ನಡ ನೆಲ, ಜಲ ಹಾಗೂ ಭಾಷೆಗಾಗಿ ನಿರಂತರ ಹೋರಾಟ. ಕಪ್ಪು ಹಣದ ವಿರುದ್ಧ ಯೋಗ ಗುರು ರಾಮದೇವ ಬಾಬಾ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದಿದ್ದ ಜನಾಂದೋಲನದಲ್ಲಿ ಭಾಗಿಯಾಗಿದ್ದರು. ನರಗುಂದ ಮತ್ತು ರೋಣ ಭಾಗಕ್ಕೆ ಜೀವನಾಡಿ ಆಗಿರುವ ಮಹದಾಯಿ, ಕಳಸಾ ಬಂಡೂರಿ ಹೋರಾಟದಲ್ಲಿ ಪ್ರಜಾ ಪರಿರ್ವತನಾ ವೇದಿಕೆಯಿಂದ ಭಾಗಿಯಾಗುವ ಮೂಲಕ ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಇನ್ನೂ ಅನೇಕ ಜನಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಶೀರಿ, ತಮ್ಮ ಸರಳತೆಯ ವ್ಯಕ್ತಿತ್ವ, ಜನತೆ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಬಸವೇಶ್ವರ ನಗರದಲ್ಲಿನ ಎಲ್ಲ ಜನರಿಗೂ ಅತ್ಯಂತ ಹತ್ತಿರವಾಗಿದ್ದಾರೆ.

ಸುಮಾರು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಂದ ಸಾಧ್ಯವಾಗದೇ ಇರುವ ಕೆಲಸವನ್ನು ಮಾಡುವ ಮೂಲಕ ವಿಶ್ವನಾಥ ಶೀರಿಯವರು ಎಲ್ಲರ ಮನೆಯ ಮಗನಂತೆ ಮಾಡಿದ್ದು, ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಮತದಾರರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವವರಿಗೆ ಸಿಂಹ ಸ್ವಪ್ನವಾಗಿ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೇ ಇಲ್ಲಿನ ಜನರು ಮಾತ್ರ ಯಾರೇ ಬಂದರೂ ನಮ್ಮ ಬೆಂಬಲ ಮಾತ್ರ ವಿಶ್ವನಾಥ ಶೀರಿಯವರಿಗೆ ಎಂಬುವಂತ ಮಾತನ್ನು ಗಟ್ಟಿಯಾಗಿ ಹೇಳುವ ಮೂಲಕ ನಿಶ್ಕಲ್ಮಷ ಮನಸ್ಸಿನಿಂದ ಬೆಂಬಲ ನೀಡಿದ್ದಾರೆ.

ಜನರಿಗೆ ಹುಸಿ ಭರವಸೆಯನ್ನು ಕೊಟ್ಟು ವಂಚನೆ ಮಾಡಲಾರೆ. ಹಣ, ಹೆಂಡದ ಆಮಿಷ ತೋರಿಸಿ ಮೋಸ ಮಾಡಲಾರೆ. ಜನರು ನೀಡಿರುವ ವಿಶ್ವಾಸಕ್ಕೆ ಧಕ್ಕೆ ತರಲಾರೆ. ಜನರು ನೀಡಿದ ಮತ ಭಿಕ್ಷೆಯನ್ನು ಸ್ವೀಕರಿಸಿ ಎಲ್ಲರ ಮನೆಯ ಮಗನಂತೆ ದುಡಿಯುತ್ತೇನೆ ಎನ್ನುತ್ತಾರೆ ವಿಶ್ವನಾಥ ಶೀರಿ ಹಾಗಿದ್ದರೇ ಒಮ್ಮೆ ಕೇಳಿ ಅಭ್ಯರ್ಥಿಯ ಮನದಾಳದ ಮಾತು..

ಒಟ್ಟಿನಲ್ಲಿ ದಿಟ್ಟತನದಿಂದ ಹೋರಾಡಿದ ಜನನಾಯಕ ಈಗ ಜನರ ಸೇವೆಗೆ ಮುಂದಾಗಿದ್ದಾರೆ. ಯಾವುದೇ ಬಣ್ಣದ ಮಾತುಗಳಿಗೆ ಮರುಳಾಗದೇ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನಿಮ್ಮ ಸೇವೆ ಮಾಡುವ ಅಭ್ಯರ್ಥಿಗೆ ನೀಡಿ ಎಂಬುವುದು ವಿಶ್ವನಾಥ ಶೀರಿಯ ಮಾತು. ಈಗ ಜನರೇ ಸ್ವಯಂ ಪ್ರೇರಿತರಾಗಿ ಜನರ ಸೇವೆ ಮಾಡಲು ಶೀರಿಯವರಿಗೆ ಅವಕಾಶ ನೀಡಲು ಮುಂದಾಗಿರುವುದು ವಿಶೇಷವಾಗಿದೆ. ಜನರ ಆಸೆಯಂತೆಯೇ ಆರಿಸಿ ಬಂದು ಜನನಾಯಕ ಜನರ ಸೇವೆಗೆ ನಿಲ್ಲಲಿ ಎಂಬುವುದು ಬಸವೇಶ್ವರ ನಗರದ ಜನತೆಯ ಆಶಯ.

Edited By : Nagesh Gaonkar
PublicNext

PublicNext

25/12/2021 08:58 pm

Cinque Terre

89.44 K

Cinque Terre

0

ಸಂಬಂಧಿತ ಸುದ್ದಿ