ಬಾಗಲಕೋಟೆ: ಸಿಎಂ ಬೊಮ್ಮಾಯಿಯವರು ನನ್ನ ಹಿರಿಯ ಅಣ್ಣನಂತಿದ್ದಾರೆ. ವೈಯಕ್ತಿಕ, ರಾಜಕೀಯ ಹಾಗೂ ಯಾವುದೇ ವಿಚಾರ ಇದ್ದರೂ ಮೊದಲು ಅವರ ಬಳಿ ಹೇಳಿಕೊಳ್ಳುತ್ತೇನೆ. ಸದ್ಯ ಅವರು ಸಿಎಂ ಹುದ್ದೆಯಲ್ಲಿದ್ದಾರೆಂದು ನಾನು ಈ ಮಾತು ಹೇಳುತ್ತಿಲ್ಲ. ಬದಲಾಗಿ ಅವರಿಗೂ ನನಗೂ 30 ವರ್ಷದ ಕೌಟುಂಬಿಕ ಸ್ನೇಹ ಸಂಬಂಧ ಇದೆ ಎಂದು ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹುಬ್ಬಳಿಗೆ ಹೋದಾಗಲೆಲ್ಲ ಅವರ ಮನೆಗೆ ಹೋಗಿ ಚಹಾ ಕುಡಿಯದೇ ಮುಂದೆ ಹೋಗಲ್ಲ. ಬೆಂಗಳೂರಿನಲ್ಲಿ ಇದ್ರೆ ಅವರು (ಸಿಎಂ) ನಮ್ಮ ಮನೆಗೆ ಬರದೇ ಇರೋದಿಲ್ಲ.. ನನ್ನ ಅವರ ಮಧ್ಯೆ ಉತ್ತಮ ಒಡನಾಟ ಇರೋದ್ರಿಂದ. ಕಾಣದ ಶಕ್ತಿಗಳು ಈ ಸಂಬಂಧವನ್ನ ದೂರ ಮಾಡುವ ಕೆಲಸ ಮಾಡ್ತಿರಬಹುದು. ದೂರ ಮಾಡುತ್ತಿರುವವರು ನಮ್ಮ ಪಕ್ಷದವರೇ ಇರಬಹುದು ಅಥವಾ ಬೇರೆಯವರಿರಬಹುದು. ಅದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಈಶ್ವರಪ್ಪನವರು, ಮುಂದಿನ ಸಿಎಂ ನಿರಾಣಿ ಎಂದು ನೀಡಿದ ಹೇಳಿಕೆಗೆ ಮಾತನಾಡಿದ ನಂತ್ರ ನಾನು ಈ ಬಗ್ಗೆ ಕ್ಲ್ಯಾರಿಫೈ ಮಾಡಿದ್ದೀನೆ ನಾನು ಸಿಎಂ ಆಕಾಂಕ್ಷಿಯಲ್ಲ. 2023ರ ವರೆಗೆ ಬೊಮ್ಮಾಯಿಯವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಅವರು ಜನಪರ ಕೆಲಸ ಮಾಡಿದ್ದಾರೆ. ಮುಂದೊಂದು ದಿನ ಅವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನ ಸಿಗುತ್ತೆ ಎಂದಷ್ಟೇ ಹೇಳಿದ್ದೇನೆ ಹೊರತು, ಸಿಎಂ ಬದಲಾವಣೆ ಬಗ್ಗೆ ಎಲ್ಲೆಲ್ಲೂ ಹೇಳಿಲ್ಲ ಎಂದು ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
PublicNext
25/12/2021 07:21 pm