ಬೆಳಗಾವಿ:ಬಿಜೆಪಿ ಸರ್ಕಾರ ಮತಾಂತರ ಕಾಯ್ದೆ ಜಾರಿಗೆ ತರಲು ಮುಂದಾಗಿದೆ.ಆದರ ಕಾಂಗ್ರೆಸ್ ಮುಂಖಡರು ಇನ್ನ ವಿರೋಧಿಸಲುತ್ತಲೇ ಬಂದಿದ್ದಾರೆ. ಇದನ್ನ ವಿರೋಧಿಸುವ ಭರದಲ್ಲಿಯೆ ಸಿದ್ದರಾಮಯ್ಯನವರು ಸದನಲ್ಲಿಯೇ ಇಕ್ಕಟ್ಟಿಗೂ ಸಿಲುಕಿದರು.ಯಾಕೆ ಅಂತ ಹೇಳ್ತೀವಿ ನೋಡಿ.
ಮತಾಂತರ ಕಾಯ್ದೆ ವಿಧೇಯಕ ಮಂಡನೆಯ ವಿಚಾರ ಇಂದು ನಿನ್ನೆಯದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮಂಡನೆ ಆಗಬೇಕಿದ್ದ ಸತ್ಯ. ಆದರೆ ಅದನ್ನ ಈಗ ಬಿಜೆಪಿ ಸರ್ಕಾರ ಮಾಡುತ್ತಿದೆ ಅನ್ನೋದು ಕಾನೂನು ಸಚಿವ ಮಾಧುಸ್ವಾಮಿ ಅವರ ಮಾತಿನ ಒಟ್ಟು ಅರ್ಥ.
ಕಾನೂನು ಸಚಿವ ಮಾಧುಸ್ವಾಮಿ ಸದನದಲ್ಲಿ ಸಿದ್ದರಾಮಯ್ಯನವಿಗೆ ತಕ್ಕ ಉತ್ತರ ಕೊಡ್ತಾಯಿದ್ದರು.2014-2016 ರಲ್ಲಿ ಕಾನೂನು ಆಯೋಗಕ್ಕೆ ಕಾಂಗ್ರೆಸ್ ವಿಧೇಯಕ ಮಂಡನೆಗೆ ಸಂಬಂಧಿಸಿದಂತೆ ಪತ್ರ ಬರೆದಿತ್ತು.ಈ ವಿಚಾರ ಪರಿಶೀಲನಾ ಸಮೀತಿಯ ಮುಂದೆ ಬಂದಿದ್ದನ್ನೂ ಮಾಧುಸ್ವಾಮಿ ಪ್ರಸ್ತಾಪಿಸಿದರು. ಆಗ ಸಿದ್ದರಾಮಯ್ಯ ಕಕ್ಕಾಬಿಕ್ಕಿ ಆದರು.
ಅಂದಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಕರಡು ನೀತಿಯನ್ನ ಸಿದ್ಧಪಡಿಸಲು ಕಾನೂನು ಆಯೊಗಕ್ಕೆ ಪತ್ರ ಬರೆದಿದ್ದರು.ಕಾನೂನು ಆಯೋಗವೂ ಕರಡು ಪ್ರತಿಯನ್ನ ಪರಿಶೀಲಿಸಿ ಪರಿಶೀಲನಾ ಸಮಿತಿ ಮುಂದೆ ಇಟ್ಟಿತ್ತು. ಅದರಲ್ಲಿಯೇ ನಾವು ಒಂದಷ್ಟು ಹೊಸ ವಿಷಯವನ್ನ ಸೇರಿಸಿ ಮಂಡಿಸಿತ್ತಿದ್ದೇವೆ. ಅದಕ್ಕೆ ಸಹಕಾರ ಕೊಡಿ ಅಂತಲೂ ಮಾಧುಸ್ವಾಮಿ ಮನವಿ ಮಾಡಿದರು.
PublicNext
24/12/2021 02:09 pm