ಬೆಳಗಾವಿ:ಮತಾಂತರ ಕಾಯ್ದೆ ಮೂಲಕ ರಾಜ್ಯ ಸರ್ಕಾರ ಗಾಂಧಿ ಕಂಡ ಕನಸನ್ನ ನನಸು ಮಾಡುತ್ತಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಸದನದಲ್ಲಿ ಹೇಳಿದ್ದಾರೆ.
ಮತಾಂತರ ಕಾಯ್ದೆ ಅಂಗೀಕಾರಕ್ಕೂ ಮುನ್ನೆ ಸಾಕಷ್ಟು ಚರ್ಚೆಗಳೂ ಆಗಿವೆ. ಅದರಂತೆ ಅದೇ ಸಮಯದಲ್ಲಿಯೇ ಡಾಕ್ಟರ್ ಕೆ.ಸುಧಾಕರ್ ಕೂಡ ಮಾತನಾಡಿದ್ದಾರೆ.
ಗಾಂಧೀಜಿ ಅವರು ಮತಾಂತರವನ್ನ ವಿರೋಧಿಸುತ್ತಲೇ ಬಂದಿದ್ದಾರೆ. 1935ರ ಹರಿಜನ ಪತ್ರಿಕೆಯಲ್ಲೂ ಇದನ್ನ ಬರೆದಿದ್ದಾರೆ. ಅದರಂತೆ ನನಗೆ ಕಾನೂನು ರಚಿಸುವ ಅಧಿಕಾರ ಇದಿದ್ದರೇ, ನಾನು ಮತಾಂತರ ನಿಷೇಧಿಸುತ್ತಿದ್ದೆ ಅಂತಲೂ ಹೇಳಿದ್ದಾರೆ. ಸದನದಲ್ಲಿ ಗಾಂಧಿಜಿ ಅವರ ಈ ವಿಚಾರವನ್ನ ಸಚಿವ ಕೆ.ಸುಧಾಕ್ ಕೋಟ್ ಮಾಡಿಯೇ ಹೇಳಿದ್ದಾರೆ.
ಮತಾಂತರ ಕಾಯ್ದೆ ಜಾರಿ ಮೂಲಕ ಸರ್ಕಾರ ಈಗ ಗಾಂಧೀಜಿ ಅವರ ಆಸೆಯನ್ನ ಈಡೇರಿಸುತ್ತಿದೆ ಅಂತಲೂ ವಿವರಿಸಿದ್ದಾರೆ
ಸಚಿವ ಕೆ.ಸುಧಾಕರ್.
PublicNext
24/12/2021 11:54 am