ಬೆಳಗಾವಿ: 'ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಉಳಿದ ಬಹಳಷ್ಟು ನಾಯಕರಿದ್ದಾರೆ. ಆದರೆ, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ ಎಂದು ಸುರ್ಣ ಸೌಧದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಗಲೀಜ್ ಜಬ್ಬಾರ್ ಎಂಬುವರನ್ನು ಕರೆದುಕೊಂಡು ಬರಲಾಯಿತು. ಆತ ಬರುವಾಗ ರೂಲ್ಸ್ ರಾಯ್ ನಲ್ಲಿ ಬಂದಿದ್ದರು, ಚುನಾವಣೆಯಲ್ಲಿ ಸೋತು ಹೋಗುವಾಗ ಆಟೋದಲ್ಲಿ ಹೋಗಿದ್ದಾರೆ.
ಬಾಕಿ ಎಲ್ಲಾ ಹೋಗಿ ಸದ್ಯ ಬರೀ ಚಡ್ಡಿ ಮಾತ್ರ ಉಳಿದಿದೆ ಸ್ವಾಮಿ ಎಂದು ಎಂದು ಆತ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಸ್ಥಳೀಯ ಸಂಸ್ಥೆಗಳಿಂದ ಇತ್ತೀಚಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ಇಬ್ರಾಹಿಂ ಲೇವಡಿ ಮಾಡಿದರು.
ಮತಾಂತರ ವಿರೋಧಿ ಮಸೂದೆ ಕುರಿತು ಬಿಜೆಪಿಗೆ ಟಾಂಗ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಬದಲು ಪಕ್ಷಾಂತರ ನಿಷೇಧ ಮಸೂದೆ ತನ್ನಿ. ಸಮಾಜದಲ್ಲಿ ದ್ವೇಷವನ್ನ ಹೆಚ್ಚು ಮಾಡ್ತಿದ್ದಾರೆ. ಮುಸಲ್ಮಾನರಾದರೂ ಅವರು ಭಾರತೀಯರು ಮುಸಲ್ಮಾನರಾದ ಮಾತ್ರಕ್ಕ ಪಾಕಿಸ್ತಾನಕ್ಕೆ ಹೋಗಬೇಕಾ? ನಮ್ಮ ಸರ್ಕಾರ ಬಂದರೆ ಹಲವು ಕಾಯ್ದೆ ಹಿಂಪಡೆಯುತ್ತೇವೆ ಎಂದು ಹೇಳಿದರು.
PublicNext
23/12/2021 07:13 pm