ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರ ಸಮಸ್ಯೆಗೆ ಸ್ಪಂದಿಸಲು ಸಿದ್ಧರಾದ ಜನನಾಯಕಿ ವಿದ್ಯಾವತಿ ಗಡಗಿ : 34ನೇ ವಾರ್ಡಿನಲ್ಲಿ ಬಿಜೆಪಿಯಿಂದ ಸ್ಪರ್ಧೆ

ಗದಗ: ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬ ಗಾದೆ ಅಕ್ಷರಶಃ ಸತ್ಯ. ಸುಮಾರು ವರ್ಷಗಳಿಂದ ತಾವು ಅನುಭವಿಸಿರುವ ಸಾರ್ವಜನಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸಾರ್ವಜನಿಕರನ್ನು ಸಮಸ್ಯೆಗಳಿಂದ ಮುಕ್ತಮಾಡಲು ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಬಿಜೆಪಿ ಪಡೆಯಿಂದ ವಿದ್ಯಾವತಿ ಅಮರನಾಥ ಗಡಗಿಯವರು ಸ್ಪರ್ಧೆಗೆ ಇಳಿದಿದ್ದಾರೆ. ಪ್ರಮುಖವಾಗಿ ಮಹಿಳೆಯರು ಅನುಭವಿಸುವ ಸುಮಾರು ವರ್ಷಗಳ ಕಷ್ಟಗಳಿಗೆ ಬ್ರೇಕ್ ಹಾಕಲು ಚಿಂತನೆ ನಡೆಸಿದ್ದು, ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಾರ್ವಜನಿಕ ಸೇವೆಗೆ ಅವಕಾಶ ಕೇಳುತ್ತಿದ್ದಾರೆ.

ಹೌದು.. ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಿದ್ಯಾವತಿ ಅಮರನಾಥ ಗಡಗಿ ಅವರು 34ನೇ ವಾರ್ಡಿನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಪದವೀಧರೆಯಾಗಿರುವ ವಿದ್ಯಾವತಿಯವರು. ಮೂಲತಃ ರಾಜಕೀಯ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೂ ಸಾಕಷ್ಟು ರಾಜಕೀಯ ಅನುಭವವನ್ನು ಪಡೆದಿದ್ದಾರೆ. ಅಲ್ಲದೇ ರಾಮದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರ ಅಣ್ಣನ ಮಗಳಾಗಿರುವ ವಿದ್ಯಾವತಿಯವರು ನಮ್ಮ ಜನರಿಗಾಗಿ ಹಾಗೂ ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಕನಸನ್ನು ಹೊತ್ತುಕೊಂಡು ಸ್ಪರ್ಧೆಗೆ ಇಳಿದಿದ್ದಾರೆ. ಶಾಸಕ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ ಅವರ ಅಣ್ಣನ ಮಗಳು ವಿದ್ಯಾವತಿಯವರಿಗೆ ಮೊದಲಿನಿಂದಲೂ ಸಾರ್ವಜನಿಕರ ಸೇವೆ ಮಾಡುವ ಆಸೆ ಇತ್ತು. ಈಗ ಜನರೇ ಅವರಿಗೆ ಒಂದು ಅವಕಾಶವನ್ನು ಕೊಟ್ಟಿದ್ದಾರೆ. ಹಾಗಿದ್ದರೇ ಅವರ ಚಿಂತನೆ ಬಗ್ಗೆ ಅವರ ಬಾಯಿಂದಲೇ ಕೇಳಿ...

ಇನ್ನೂ ವಿದ್ಯಾವತಿಯವರ ಪತಿ ಅಮರನಾಥ ಅವರು ಕೂಡ ಸುಮಾರು ವರ್ಷಗಳಿಂದ ಕಮಲ ಪಡೆಯ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಶಹರ ಕಾರ್ಯದರ್ಶಿಯಾಗಿ ಕೂಡ ಬಿಜೆಪಿಯಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲದೇ ವಿದ್ಯಾವತಿ ಅವರ ಮಾವನವರು ಕೂಡ ನಿವೃತ್ತ ಸಹಾಯಕ ಆಯುಕ್ತರು. ಕೌಟುಂಬಿಕವಾಗಿ ರಾಜಕೀಯ ರಂಗದಲ್ಲಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಈ ಎಲ್ಲ ಅನುಭವವನ್ನು ಜನರ ಸೇವೆಗೆ ವಿನಿಯೋಗಿಸಲು ವಿದ್ಯಾವತಿ ಅವರು ಸಿದ್ಧರಾಗಿದ್ದಾರೆ. ಅವರಿಗೆ ಪಕ್ಷದ ಬೆಂಬಲದ ಜೊತೆಗೆ ಸಾರ್ವಜನಿಕರ ಆಶೀರ್ವಾದ ಕೂಡ ಇದೆ.

ಸಾಕಷ್ಟು ಯೋಜನೆಯ ಕನಸನ್ನು ಕಟ್ಟಿಕೊಂಡಿರುವ ವಿದ್ಯಾವತಿ ಅವರು, ಮೂಲಭೂತ ಸಮಸ್ಯೆಗಳ ಪರಿಹಾರ, ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾತ್ರವಲ್ಲದೆ. ಭೀಷ್ಮ ಕೆರೆ ಅಭಿವೃದ್ಧಿ, ಸಾರ್ವಜನಿಕ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿದ್ದು,‌ ಜನರು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮನೆಯಲ್ಲಿ ಗೃಹಿಣಿಯಾಗಿದ್ದ ಮಹಿಳೆ ಈಗ ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗಲು ನಿರ್ಧಾರ ಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಮಾಜ ನಮಗೆ ಏನೆಲ್ಲಾ ಕೊಟ್ಟಿದೆ. ಸಮಾಜಕ್ಕೆ ನಾವು ಕೂಡ ಏನಾದರೂ ಕೊಡಬೇಕು ಎಂಬುವಂತ ದಿಟ್ಟತನದಿಂದ ವಿದ್ಯಾವತಿ ಅಮರನಾಥ ಗಡಗಿಯವರು ಸ್ಪರ್ಧೆಗೆ ಇಳಿದಿದ್ದು, ಜಯಶಾಲಿಯಾಗಿ ನಮ್ಮೆಲ್ಲರ ಸಮಸ್ಯೆ ಬಗೆಹರಿಸಲಿ ಎಂಬುವುದು ಮತದಾರರ ಆಶಯವಾಗಿದೆ.

Edited By : Nagesh Gaonkar
PublicNext

PublicNext

23/12/2021 11:21 am

Cinque Terre

94.05 K

Cinque Terre

1

ಸಂಬಂಧಿತ ಸುದ್ದಿ