ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುನಾವಣಾಪೂರ್ವ ಸಮೀಕ್ಷೆ: ಗೋವಾದಲ್ಲಿ ಬಿಜೆಪಿಯದ್ದೇ ಮೇಲುಗೈ

ಪಣಜಿ : 2022 ಗೋವಾ ವಿಧಾನಸಭೆ ಚುನಾವಣೆ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಪೋಲ್ ಸ್ಟ್ರಾಟ್-ನ್ಯೂಸ್ ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆ ಮುನ್ಸೂಚನೆ ನೀಡಿದೆ. ಗೋವಾದ 40 ವಿಧಾನಸಭೆ ಕ್ಷೇತ್ರಗಳ ಪೈಕಿ ಸರ್ಕಾರ ರಚನೆಗೆ ಕನಿಷ್ಠ 21 ಕ್ಷೇತ್ರಗಳ ಅವಶ್ಯಕತೆ ಇದೆ. ಆದರೆ ಬಿಜೆಪಿಯು 20 ರಿಂದ 22 ಕ್ಷೇತ್ರಗಳಲ್ಲಿ ಶೇ.32.80ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಬಿಜೆಪಿ ಹೊರತಾಗಿ ಆಮ್ ಆದ್ಮಿ ಪಕ್ಷವು ಶೇ.22.10ರಷ್ಟು ಮತಗಳೊಂದಿಗೆ 5 ರಿಂದ 7 ಸ್ಥಾನಗಳಲ್ಲಿ ಜಯ ಗಳಿಸಲಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಶೇ.18.80ರಷ್ಟು ಮತಗಳೊಂದಿಗೆ 4 ರಿಂದ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಿಂದ ತಿಳಿದು ಬಂದಿದೆ.

ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕೆ ಹಲವು ವಿಷಯಗಳು ಪ್ರಮುಖವಾಗಿವೆ.

ಗೋವಾದಲ್ಲಿ ಬೇರೆ ಪಕ್ಷಗಳ ಪ್ರಭಾವ?:

ಗೋವಾ ವಿಧಾನಸಭೆ ಚುನಾವಣೆಯಲ್ಲಿ Polstrat-NewsX ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬೇರೆ ರಾಜ್ಯದ ಪಕ್ಷಗಳು ಹೆಚ್ಚು ಪ್ರಭಾವ ಬೀರುವುದಿಲ್ಲ. ಆಮ್ ಆದ್ಮಿ ಪಕ್ಷವು ಗೋವಾದಲ್ಲಿ ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ ಎಂದು ಶೇ.33.50ರಷ್ಟು ಜನರು ಹೇಳಿದ್ದಾರೆ. ಅದೇ ರೀತಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ಪ್ರಭಾವಶಾಲಿ ಆಗದು ಎಂದು ಶೇ.38ರಷ್ಟು ಜನರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

22/12/2021 09:15 pm

Cinque Terre

62.61 K

Cinque Terre

28

ಸಂಬಂಧಿತ ಸುದ್ದಿ