ಬೆಳಗಾವಿ: ತರಕಾರಿ ಬೆಲೆ ಏರಿಕೆ ಖಂಡಿಸಿ ಬೆಳಗಾವಿಯ ಸುವರ್ಣ ಸೌಧದ ಎದುರು ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತರಕಾರಿ ಬುಟ್ಟಿ ಹಿಡಿದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತರಕಾರಿ ಬೆಲೆ ಏರಿಕೆಯಿಂದ ನೇರವಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಮಹಿಳೆಯರ ಜೇಬನ್ನು ಪಿಕ್ ಪಾಕೆಟ್ ಮಾಡುತ್ತಿದೆ. ಬೆಲೆ ಏರಿಕೆ ನಿಯಂತ್ರಣ ಮಾಡೋದು ಬಿಟ್ಟು ಮತಾಂತರ ಕಾಯ್ದೆಯ ಬದಲಾವಣೆಯಲ್ಲಿ ಸರ್ಕಾರ ಇದೆ. ಬಡವರಿಗೆ ಸಹಾಯ ಮಾಡಿ, ಕೊರೊನಾ ದಿಂದ ಮೃತಪಟ್ಟರಿಗೆ ಪರಿಹಾರ ಕೊಡಿ ಎಂದರು.
PublicNext
22/12/2021 07:57 pm