ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಯಾವುದೇ ರಾಜ್ಯದ ಬಾವುಟ ಯಾರೂ ಸುಡಬಾರದು; ಶಿವರಾಜ್ ಕುಮಾರ್‌

ಯಲಹಂಕ: ಪ್ರತಿಯೊಬ್ಬರಿಗೂ ತಮ್ಮ ರಾಜ್ಯದ ಬಾವುಟ ಬಗ್ಗೆ ತುಂಬಾನೇ ಗೌರವ ಇರುತ್ತೆ. ಈ ಗೌರವಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು. ಅಂತಹವರ ವಿರುದ್ಧ ಸರ್ಕಾರವೇ ಕಾನೂನು ಕ್ರಮ ಜರುಗಿಸುತ್ತದೆ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು.

ಯಲಹಂಕ ಕೋಗಿಲು ಬಳಿ ʼವಾಜಪೇಯಿ ಕ್ರಿಕೆಟ್ ಪಂದ್ಯಾವಳಿʼಯ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಕುಕೃತ್ಯವನ್ನು ಮಹಾರಾಷ್ಟದಲ್ಲಿ ಮತ್ತೆ MES ಪುಂಡರು ಮಾಡಿದ್ದಾರೆ ಎಂಬ ವಿಚಾರ ಗೊತ್ತಾಗಿದೆ ಎಂದ ಶಿವರಾಜ್‌ ಕುಮಾರ್‌ ಈ ಬಗ್ಗೆ ತಮ್ಮ ನೋವು, ಅಸಮಾಧಾನ ಹೊರಹಾಕಿದರು.

ಡಿ. 25ರಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಬ್ಯಾಟರಾಯನಪುರದ ಜಕ್ಕೂರು ವಾರ್ಡ್‌ ನ ಸಂಪ್ರಸಿದ್ಧಿ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ. ಡಿ. 25, 26ರಂದು ಈ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, 42 ಸ್ಥಳೀಯ ತಂಡಗಳು ಭಾಗವಹಿಸಲಿವೆ. "ಯುವಜನರಲ್ಲಿ ವಾಜಪೇಯಿಯವರ ಬಗ್ಗೆ ಅಭಿಮಾನ ಮೂಡಿಸುವುದು ಮತ್ತು ಕ್ರೀಡಾಸ್ಫೂರ್ತಿ ತುಂಬಲು ಈ ಪಂದ್ಯಾವಳಿ ನೆರವಾಗಲಿದೆ" ಎಂದು ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ತಿಳಿಸಿದರು.

Edited By : Manjunath H D
PublicNext

PublicNext

22/12/2021 01:36 pm

Cinque Terre

54.29 K

Cinque Terre

2