ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸುವರ್ಣ ಸೌಧದಲ್ಲಿ ಮಾಧ್ಯಮ ಪ್ರತಿಭಟನೆ-ಸ್ಪೀಕರ್ ಸೂಚಿಸಿದ ಬಳಿಕ ಪ್ರವೇಶ ಅವಕಾಶ

ಬೆಳಗಾವಿ: ಸುವರ್ಣ ಸೌಧದಲ್ಲಿ ವಿವಾದಿತ ಮತಾಂತರ ವಿಧೇಯಕ ಚರ್ಚೆ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.

ಸ್ಪೀಕರ್ ಸೂಚನೆಗೆ ಮೇರೆಗೆ ಇಂದು ಸುವರ್ಣ ಸೌಧದದಲ್ಲಿ ಮಾಧ್ಯಮ ಪ್ರವೇಶವನ್ನ ನಿರ್ಬಂಧಿಸಲಾಗಿದೆ.ವಿಧಾನಸಭಾ ಲಾಂಜ್ ಮತ್ತು ವಿರೋಧ ಪಕ್ಷದ ಕೊಠಡಿಗಳ ಬಳಿ ಕ್ಯಾಮರಾ ಹಾಕಲು ಕೂಡ ನಿರ್ಬಂಧ ವಿಧಿಸಲಾಗಿದೆ.

ಮತಾಂತರ ಕಾಯ್ಕದೆ ಸಮಯದಲ್ಲಿ ವಿರೋಧ ಪಕ್ಷದ ರಿಯಾಕ್ಷನ್ ಗಳು ಹೈಪ್ ಆಗೋದನ್ನು ತಡೆಯಲು ಸರ್ಕಾರ ಈ ಪ್ಲಾನ್ ಹಾಕಿದೆ ಎನ್ನಲಾಗುತ್ತಿದೆ.

ಪೊಲೀಸ್ ಅಧಿಕಾರಿಗಳಿಗೂ ಕ್ಯಾಮರಾ ಒಳಗೆ ಬಿಡದಂತೆ ಸೂಚನೆ.ಮಾಧ್ಯಮಗಳ ನಿರ್ಬಂಧ ಹಿನ್ನೆಲೆ.

ಸುವರ್ಣಸೌಧದ ಮುಖ್ಯದ್ವಾರದ ಬಳಿ ಮಾಧ್ಯಮದವರು ಶಾಂತಿಯುತವಾಗಿ ಮಾಧ್ಯಮದವರಿಂದ ಪ್ರತಿಭಟನೆ ನಡೆಸಿದ್ದಾರೆ.ಆದರೆ, ಸ್ಪೀಕರ್ ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು. ಮಾಧ್ಯಮ ನಿರ್ಬಂಧಕ್ಕೆ ನಾನು ಯಾವುದೇ ಸೂಚನೆ ನೀಡಿಲ್ಲ ಎಂದು ಹೇಳಿದ್ದಾರೆ. ಎಂದಿನಂತೆ ನಿಮ್ಮ ಕೆಲಸ ಮಾಡಿಕೊಳ್ಳಿ ಅಂತಲೂ ಹೇಳಿದ್ದಾರೆ.

Edited By : Manjunath H D
PublicNext

PublicNext

22/12/2021 12:02 pm

Cinque Terre

49.33 K

Cinque Terre

0