ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಜಿಲ್ಲೆಯಲ್ಲಿ ನೀನು ಸಭೆ ಮಾಡಬೇಡ : ಕನಕಪುರದ ‘ಬಂಡೆ’ಗೆ ಗುದ್ದಿದ ‘ಟಗರು’

ಬೆಳಗಾವಿ: ಮೇಕೆದಾಟು ಪಾದಯಾತ್ರೆ ವಿಷಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪ್ರತಿಷ್ಠೆಯ ಕದನ ಶುರುವಾದಂತಿದೆ.

ಈ ಹಿಂದೆ ಬಳ್ಳಾರಿಗೆ 330 ಕಿಮೀ ಪಾದಯಾತ್ರೆ ನಡೆದಿದೆ. ನನ್ನ ಅವಧಿಯಲ್ಲಿ ಕನಿಷ್ಠ 250 ಕಿಮೀ ಪಾದಯಾತ್ರೆ ನಡೆಯಬೇಕು ಎಂಬುದು ಡಿಕೆಶಿ ಲೆಕ್ಕಾಚಾರವಂತೆ. ಆದರೆ ನೇರವಾಗಿ ಮೇಕೆದಾಟುವಿನಿಂದ ಕನಕಪುರ, ರಾಮನಗರ, ಬಿಡದಿ ಮೂಲಕ 160 ಕಿಮೀ ಪಾದಯಾತ್ರೆ ಸಾಕು ಅನ್ನೋದು ಸಿದ್ದರಾಮಯ್ಯ ವಾದವಾಗಿದೆ.

ಡಿ.ಕೆ.ಶಿವಕುಮಾರ್ ಜನವರಿ 2 ರಿಂದ ಪಾದಯಾತ್ರೆಗೆ ಸಿದ್ಧರಾಗಿ ಆನಂತರ ದಿನಾಂಕ ಬದಲಿಸಿ ಜನವರಿ 9 ರಿಂದ ಪಾದಯಾತ್ರೆಗೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಸಂಕ್ರಾಂತಿ ಕಾರಣ ನೀಡಿ ಸಿದ್ದರಾಮಯ್ಯ ಜನವರಿ 15 ರ ನಂತರ ದಿನಾಂಕ ನಿಗದಿಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಇತ್ತ ಪದೇ ಪದೇ ಪಾದಯಾತ್ರೆ ವಿಚಾರದಲ್ಲಿ ಸಿದ್ದರಾಮಯ್ಯ ಮಾತೇ ಮೇಲಾಗುತ್ತಿದ್ದಂತೆ ಕೆರಳಿದ ಡಿಕೆಶಿ, ಮೈಸೂರು ಚಾಮರಾಜನಗರ ಶಾಸಕರ ಸಭೆ ನಡೆಸಿ ಪಾದಯಾತ್ರೆ ರೂಪುರೇಷೆ ತಯಾರಿಕೆಗೆ ಮುಂದಾಗಿದ್ದಾರೆ. ಈ ವಿಷಯ ತಿಳಿದ ಸಿದ್ದು ಕಲಾಪ ಆರಂಭಕ್ಕೂ ಮುನ್ನ ಡಿಕೆಶಿಗೆ ಏಯ್ ಅಧ್ಯಕ್ಷ.. ಬಾರಯ್ಯ ಕುಳಿತುಕೋ.. ಮೈಸೂರಿನಲ್ಲಿ ನೀನು ಸಭೆ ನಡೆಸಬೇಡ. ನನ್ನ ಜಿಲ್ಲೆಯಲ್ಲಿ ಯಾವುದೇ ಸಭೆ ಮಾಡಬೇಡ ಎಂದಿದ್ದಾರೆ.

ಅಲ್ಲದೆ ಮೈಸೂರು, ಚಾಮರಾಜನಗರ ಸುದ್ದಿಗೋಷ್ಠಿಯನ್ನೂ ನಡೆಸಬೇಡ, ಕೊಡಗು ಜಿಲ್ಲೆಯಲ್ಲಿ ಬೇಕಾದರೆ ಸಭೆ ಮಾಡಿಕೋ. ಆದರೆ ನನ್ನ ಜಿಲ್ಲೆಯಲ್ಲಿ ಮಾಡಬೇಡ ಎಂದಿದ್ದಾರೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

21/12/2021 08:43 pm

Cinque Terre

45.03 K

Cinque Terre

8

ಸಂಬಂಧಿತ ಸುದ್ದಿ