ದಾವಣಗೆರೆ: ಕೃತಕ ಚಿಕನ್ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದ ಆರೋಪದ ಮೇಲೆ ನಗರದ ವೆಂಕೋಬ್ ಚಿಕನ್ ಕಚೇರಿ ಮುಂಭಾಗ ಜನರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭ ರೈತರಿಂದ ಕಡಿಮೆ ಬೆಲೆಗೆ ಕೋಳಿ ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಕೋಳಿ ಮಾರಾಟಗಾರರ ಸಂಘದ ಅಧ್ಯಕ್ಷ ಮಲ್ಲಾಪುರ ದೇವರಾಜ್ ಆರೋಪಿಸಿದ್ದಾರೆ ಹಾಗೂ ಕೋಳಿ ಆಹಾರಕ್ಕೂ ಅಭಾವ ಸೃಷ್ಠಿಸಲಾಗುತ್ತಿದೆ ಈ ಹಿನ್ನಲೆಯಲ್ಲಿ ವೆಂಕೋಬ್ ಸೇರಿದಂತೆ ವಿವಿಧ ಚಿಕನ್ ಸೆಂಟರ್ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
PublicNext
21/12/2021 03:31 pm