ಚಿಕ್ಕಮಗಳೂರು: ಹೌದು. ನಾನು ಸಂಭ್ರಮಕ್ಕಾಗಿ ಪಟಾಕಿ ಹಚ್ಚುವೆ. ಆದರೆ ನಿಮ್ಮಂತೆ ಬೆಂಕಿ ಹಚ್ಚುವ ಕೆಲಸ ಮಾಡಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
'ಪಟಾಕಿ ರವಿ' ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ ಸಿ.ಟಿ.ರವಿ, ಶುಭ ಕಾರ್ಯದಲ್ಲಿ ಸ್ವಾಗತ ಮಾಡಲು ಜನ ಪಟಾಕಿ ಹಚ್ಚುತ್ತಾರೆ. ನಾನು ಪಟಾಕಿ ಹಚ್ತೀನಿ. ಆದ್ರೆ ನನ್ನದು ಬೆಂಕಿ ಹಚ್ಚುವ ಜಾಯಮಾನ ಅಲ್ಲ. ಇವರ ಉದ್ದೇಶ ಅರಾಜಕಥೆ ಸೃಷ್ಟಿ ಮಾಡೋದು, ಬೆಂಕಿ ಹಾಕೋದು. ಈ ರೀತಿ ಬೆಂಕಿ ಹಾಕೋರು ಡೇಂಜರ್. ಊರಿಗೆ ಬೆಂಕಿ ಹಾಕಿ ಇದ್ದಿಲು ಮಾರಿದ್ರೆ ಎಷ್ಟು ಲಾಭ ಆಗುತ್ತೆ? ಎನ್ನುವ ಮನಸ್ಥಿತಿ ಕಾಂಗ್ರೆಸ್‌ನವರದು. ಬೆಂಕಿ ಹಾಕುವ ಮನಸ್ಥಿತಿ ಕಾರಣಕ್ಕೆ ಇವತ್ತು ಮರಾಠ, ಕನ್ನಡಿಗರ ನಡುವೆ ಸಂಘರ್ಷ ಉಂಟಾಗುವುದಕ್ಕೆ ಕಾರಣವಾಗಿದೆ. ಕನ್ನಡ ಬಾವುಟ ಸುಟ್ಟು ಗಲಭೆ ಎಬ್ಬಿಸುವಂತಹ ಕೆಲಸವನ್ನ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಮಾಡಿದ್ದಾರೆ. ಶಿವಾಜಿ ಪ್ರತಿಮೆ ಗೆ ಮಸಿ ಬಳಿದು ಮರಾಠಿಗರನ್ನ ಎತ್ತು ಕಟ್ಟುವ ಷಡ್ಯಂತ್ರ ನಡೆಸಿದ್ದು ಕೂಡ ಕಾಂಗ್ರೆಸ್‌ನವರು ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಸಂಗೊಳ್ಳಿರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಕರ್ನಾಟಕದಲ್ಲಿ ಮರಾಠ vs ಕನ್ನಡಿಗರು ಎಂದು ಸಂಘರ್ಷ ಉಂಟು ಮಾಡುವ ಸಂಚು ಮಾಡಿದ್ದಾರೆ. ಇದೆಲ್ಲದರ ಹಿಂದೆ ಕಾಂಗ್ರೆಸ್ ಇದೆ. ಈಗ ಬಂಧನವಾಗಿರೋದು ಕೂಡ ಕಾಂಗ್ರೆಸ್ ಬೆಂಬಲಿಗರು. ಬಂಧಿತರು ಡಿ.ಕೆ.ಶಿವಕುಮಾರ ಹಾಗೂ ಜಮೀರ್ ಖಾನ್ ಬೆಂಬಲಿಗರಾಗಿದ್ದಾರೆ. ತುಕ್ಡೆ ಗ್ಯಾಂಗ್‌ನಲ್ಲಿದ್ದವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಅದು ಕನ್ಹಯ್ಯ ಕುಮಾರ್ ಇರಬಹುದು. ಹಾರ್ದಿಕ್ ಪಟೇಲ್ ಇರಬಹುದು. ಇದೇ ತುಕ್ಡೆ ಗ್ಯಾಂಗ್‌ನ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ ಎಂದು ಸಿ.ಟಿ ರವಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
PublicNext
21/12/2021 01:42 pm