ಗದಗ: ಚುನಾವಣೆಯಲ್ಲಿ ಆಯ್ಕೆಯಾಗಿ ಬಂದರೇ ಕೇವಲ ಚುನಾಯಿತ ಪ್ರತಿನಿಧಿಗಳು ಮಾತ್ರ ಸೇವೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಗದಗ ನಗರದ ಗಡ್ಡಿ ಕುಟುಂಬ ಮಾತ್ರ ಯಾರೊಬ್ಬರು ಚುನಾಯಿತರಾದರೂ ಮನೆ ಮಂದಿಯೇ ನಿಂತು ಸಾರ್ವಜನಿಕರ ಸೇವೆಯನ್ನು ಮಾಡುವ ಮೂಲಕ ಜನಮನ್ನಣೆ ಪಡೆದ ಕುಟುಂಬ. ಇಂತಹ ಬಹುದೊಡ್ಡ ಹೆಸರು ಮಾಡಿರುವ ಕುಟುಂಬದಿಂದ ಅನಿತಾ ವಿಜಯಕುಮಾರ್ ಗಡ್ಡಿಯವರು ಗದಗ-ಬೇಟಗೇರಿ ನಗರಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.
ಗದಗ-ಬೇಟಗೇರಿ ನಗರಸಭೆ ಚುನಾವಣೆಯಲ್ಲಿ 33ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದು, ಪತಿಯಾಗಿರುವ ವಿಜಯಕುಮಾರ್ ಅವರಿಂದ ಸಾಕಷ್ಟು ರಾಜಕೀಯ ಹಾಗೂ ಅಭಿವೃದ್ಧಿ ಕಾರ್ಯಗಳ ಅನುಭವ ಪಡೆದಿರುವ ಅನಿತಾ ಅವರು 33ನೇ ವಾರ್ಡನ್ನು ಮಾದರಿ ವಾರ್ಡ್ ಆಗಿ ಮಾಡುವ ಮೂಲಕ ಸಾರ್ವಜನಿಕ ಸೇವೆ ಮಾಡಲು ಮುಂದಾಗಿದ್ದಾರೆ.
ಇನ್ನೂ ಶ್ರೀಮತಿ ಅನಿತಾ ವಿಜಯಕುಮಾರ್ ಗಡ್ಡಿಯವರ ಪತಿಯು 1997-2001ರ ಅವಧಿಯಲ್ಲಿಯೇ ಸ್ವತಂತ್ರ ಅಭ್ಯರ್ಥಿಯಾಗಿ ನಗರಸಭೆ ಸದಸ್ಯರಾಗಿದ್ದ ವಿಜಯಕುಮಾರ್ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದ ಅಭಿವೃದ್ಧಿ ಕಾರ್ಯದ ಮೂಲಕ ಅಚ್ಚೊತ್ತಿದ್ದಾರೆ. ಎರಡು ಪೆಟ್ರೋಲ್ ಬಂಕ್ ಹಾಗೂ ಶ್ರೀ ಫಕ್ಕಿರೇಶ್ವರ ಸ್ಟೋನ್ ಕ್ರಶರ್, ವಾಗಾ ರೆಡಿ ಮಿಕ್ಸ್ ಕಾಂಕ್ರಿಟಿನ ಮೂರು ಯುನಿಟ್ ಹೊಂದಿರುವ ಇವರು ಸುಮಾರು ಎರಡು ನೂರು ಜನರಿಗೆ ಉದ್ಯೋಗ ನೀಡುವ ಮೂಲಕ ನೂರು ಕುಟುಂಬಕ್ಕೆ ದಾರಿ ದೀಪವಾಗಿದ್ದಾರೆ.
ಜನರು ನೀಡಿದ ತೆರಿಗೆ ಹಣದಲ್ಲಿಯೇ ಯಾವುದೇ ಅನುದಾನ ಇಲ್ಲದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದ ವಿಜಯಕುಮಾರ್. ಚರಂಡಿ, ನೀರು ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಗೆ ಸ್ಪಂದಿಸಿದ ಜನನಾಯಕ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಸುಮಾರು 21 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಅನುಭವಿಸಿರುವ ಹಾಗೂ ಗಮನಿಸಿರುವ ಗಡ್ಡಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಇವರು ಮಾಡಿರುವ ಕಾರ್ಯಗಳೇ ಇವರ ಪತ್ನಿಗೆ ಶ್ರೀರಕ್ಷೆಯಾಗಲಿದೆ.
ಒಟ್ಟಿನಲ್ಲಿ ಸಾಕಷ್ಟು ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಯನ್ನು ಮಾಡುವ ಮೂಲಕ ಹೆಸರು ಮಾಡಿರುವ ಗಡ್ಡಿ ಮನೆತನ ಮತ್ತೊಮ್ಮೆ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಿ ಎಂಬುವುದು ಇಲ್ಲಿನ ಜನರ ಆಶಯವಾಗಿದೆ.
PublicNext
21/12/2021 09:53 am