ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೋಟರ್ ಐಡಿಗೆ ಆಧಾರ್ ಲಿಂಕ್ ಮಸೂದೆ ; ಲೋಕಸಭೆಯಲ್ಲಿ ಅಂಗೀಕಾರ

ದೇಶದಲ್ಲಿ ಎಲ್ಲದಕ್ಕೂ ಆಧಾರ ಲಿಂಕ್ ಕಡ್ಡಾಯವಾಗಿದೆ. ಸದ್ಯ ತೀವ್ರ ವಿರೋಧದ ನಡುವೆಯೂ ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮಸೂದೆಗೆ ಇಂದು ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು, ಚುನಾವಣಾ ಕಾನುನು(ತಿದ್ದುಪಡಿ) ಮಸೂದೆ ಮಂಡಿಸಿದರು. ಮಂಡನೆ ವೇಳೆ ಇನ್ಮುಂದೆ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಬಹುದು ಎಂದರು.

ಇನ್ನು, ಚುನಾವಣಾ ಕಾನುನು(ತಿದ್ದುಪಡಿ) ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಯ್ತು. ಬಳಿಕ ಧ್ವನಿ ಮತದ ಮೂಲಕ ಬಿಲ್ ಪಾಸ್ ಮಾಡಲಾಗಿದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂದು ಕೇಂದ್ರ ತಿಳಿಸಿದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ವೋಟರ್ಸ್ ಪೋರ್ಟಲ್ ಗೆ ಭೇಟಿ ನೀಡಿ : https://voterportal.eci.gov.in/

Edited By : Nirmala Aralikatti
PublicNext

PublicNext

20/12/2021 10:20 pm

Cinque Terre

38.16 K

Cinque Terre

7