ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎದ್ದುನಿಂತು ಮಾತನಾಡಲು ಉತ್ಸಾಹ ತೋರದ ರೇವಣ್ಣ : ನಾಯಕತ್ವದ ಕೊರತೆ ಎದುರಿಸಿದ JDS

ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ವಿವಿಧ ಚರ್ಚೆ, ಗಲಾಟೆ ಗದ್ದಲದ ಮಧ್ಯೆಯೂ ಅಧಿವೇಶನ ಮುಂದುವರೆದಿದೆ.

ಇಂದು ನಡೆದ ಅಧಿವೇಶನದಲ್ಲಿ ಜೆಡಿಎಸ್ ನಾಯಕತ್ವದ ಕೊರತೆಯನ್ನು ಅನುಭವಿಸಿದೆ. ಹೌದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಪುಂಡಾಟಿಕೆ ಕುರಿತು ಜಾತ್ಯತೀಯ ಜನತಾದಳ (ಜೆಡಿಎಸ್) ಕಾರ್ಯಕರ್ತರು ವಿಷಯ ಪ್ರಸ್ತಾಪಿಸಿದರು. ಆದರೆ ನಾಯಕತ್ವ ಕೊರತೆಯ ಕಾರಣ ಜೆಡಿಎಸ್ ಸದಸ್ಯರಿಗೆ ತಮ್ಮ ವಾದವನ್ನು ಸಂಪೂರ್ಣವಾಗಿ ಮಂಡಿಸಲು ಅವಕಾಶ ಕಳೆದುಕೊಂಡರು.

ಪ್ರಸ್ತಾವವನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸುವಲ್ಲಿ ಜೆಡಿಎಸ್ ನಾಯಕರು ವಿಫಲರಾದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪುರ ಗೈರು ಹಾಜರಾಗಿದ್ದರು.

ಮತ್ತೋರ್ವ ಹಿರಿಯ ನಾಯಕ ಎಚ್.ಡಿ.ರೇವಣ್ಣ ಸದನದಲ್ಲಿ ಉಪಸ್ಥಿತರಿದ್ದರು, ಆದರೆ ಮೇಲೆದ್ದು ಮಾತನಾಡುವ ಉತ್ಸಾಹ ತೋರಲಿಲ್ಲ. ಹೀಗಾಗಿ ಸ್ಪೀಕರ್ ಗಮನಸೆಳೆಯಲು, ಸ್ಪೀಕರ್ ಮೇಲೆ ಒತ್ತಡ ಹಾಕಲು ಜೆಡಿಎಸ್ ಶಾಸಕರಿಗೆ ಸಾಧ್ಯವಾಗಲಿಲ್ಲ.

ಜೆಡಿಎಸ್ ಹೋರಾಟ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಯಿತು.

Edited By : Nirmala Aralikatti
PublicNext

PublicNext

20/12/2021 09:06 pm

Cinque Terre

64.38 K

Cinque Terre

2