ಬೆಳಗಾವಿ: ನಾನು ಸತ್ತು ನಾಲ್ಕು ದಿನ ಆಯ್ತು. ಸುಮ್ನೆ ಸತ್ತವನನ್ನು ಮಾತಾಡಿಸಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಕೈ ಮುಗಿದು ಕೇಳಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಬಗ್ಗೆ ರಮೇಶ್‌ಕುಮಾರ್‌ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಳು ಮುಂದಾದಾಗ ಅವರನ್ನು ತಡೆದ ರಮೇಶ್‌ಕುಮಾರ್ ಈ ರೀತಿ ಆಕ್ರೋಶದಿಂದ ಪ್ರತಿಕ್ರಿಯೆ ಕೊಟ್ಟು ಜಾರಿಕೊಂಡಿದ್ದಾರೆ.
'ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಗದಿದ್ದರೆ ಎಂಜಾಯ್ ಮಾಡಿ' ಎಂಬ ಇಂಗ್ಲೀಷ್ ಉಕ್ತಿಯನ್ನು ಇತ್ತೀಚೆಗೆ ಸದನದಲ್ಲಿ ಹೇಳಿದ್ದ ರಮೇಶ್‌ಕುಮಾರ್ ಬಹುತೇಕರ ವಿರೋಧ ಕಟ್ಟಿಕೊಂಡಿದ್ದರು. ಆಗಿನಿಂದ ಅವರು ಮಾಧ್ಯಮಗಳಿಗೆ ಯಾವುದೇ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ.
PublicNext
20/12/2021 12:59 pm