ಬೆಂಗಳೂರು: ಪದೇ ಪದೇ ಸಿಎಂ ಬದಲಾವಣೆ ಮಾಡೋದು ಹುಡುಗಾಟವಲ್ಲ. 100ಕ್ಕೆ 100% ಹೇಳ್ತೀನಿ ಸಿಎಂ ಬದಲಾವಣೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಇತ್ತೀಚೆಗೆ ತಮ್ಮ ಭಾಷಣದಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತ ಅಧಿಕಾರದಲ್ಲಿ ಯಾರು ಶಾಶ್ವತವಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಸಿಎಂ ಬದಲಾವಣೆ ಮಾಡೋ ಅವಶ್ಯಕತೆ ನಮ್ಮ ಪಕ್ಷಕ್ಕೆ ಇಲ್ಲ. ನಿನ್ನೆ ಸಿಎಂ ಹೇಳಿರುವ ಭಾವನೆಯೇ ಬೇರೆ. ಅದರ ಅರ್ಥವೇ ಬೇರೆ. ಶಿಗ್ಗಾವಿ ಕ್ಷೇತ್ರದಲ್ಲಿ ತಮ್ಮ ಜನರ ಮೇಲಿನ ಪ್ರೀತಿಗೆ ಸಿಎಂ ಬೊಮ್ಮಾಯಿ ಹಾಗೆ ಮಾತಾಡಿದ್ದಾರೆ.
ಮೊದಲ ಬಾರಿ ಶಾಸಕರಾದಾಗ ಜಲಸಂಪನ್ಮೂಲ ಮಂತ್ರಿ ಆದ್ರು. ಅಮೇಲೆ ಗೃಹ, ಸಹಕಾರಿ ಮಂತ್ರಿ ಆಗಿ ಸಿಎಂ ಆಗಿದ್ದಾರೆ. 40% ಅಲ್ಪಸಂಖ್ಯಾತರರು ಇರುವ ಕ್ಷೇತ್ರ ಅದು. ಬೊಮ್ಮಾಯಿ ಅಂತ ಜನ ಅಲ್ಲಿ ಪ್ರೀತಿ, ವಿಶ್ವಾಸದಿಂದ ಕೈ ಹಿಡಿದಿದ್ದಾರೆ. ಕ್ಷೇತ್ರದ ಜನ ಆಯ್ಕೆ ಮಾಡಿದ್ದಕ್ಕೆ ಹಾಗೂ ಯಡಿಯೂರಪ್ಪ ಅವರು ಅವಕಾಶ ಮಾಡಿಕೊಟ್ಟ ಮೇಲೆ ಸಿಎಂ ಸ್ಥಾನ ಸಿಕ್ಕಿದೆ. ಆ ಅರ್ಥದಲ್ಲಿ ಅವ್ರು ಹೇಳಿದ್ದಾರೆ ಅಷ್ಟೆ. ಪದೇಪದೇ ಸಿಎಂ ಬದಲಾವಣೆ ಎನ್ನುವ ಮಾತೇ ಅಪ್ರಸ್ತುತ ಎಂದು ಡಾ. ಸುಧಾಕರ್ ಹೇಳಿದ್ದಾರೆ.
PublicNext
20/12/2021 12:58 pm