ಮುಂಬೈ:ನಮ್ಮ ಕ್ಷೇತ್ರದ ರಸ್ತೆಗಳು ನುಣುಪಾಗಿವೆ. ನಟಿ ಹೇಮಾ ಮಾಲಿನಿ ಅವರ ಕೆನ್ನೆ ಥರ ಇವೆ. ಹೀಗಂತ ತಮ್ಮ ಕ್ಷೇತ್ರದ ರಸ್ತೆಗಳನ್ನ ನಟಿ ಹೇಮಾ ಮಾಲಿನಿಗೆ ಹೋಲಿಕೆ ಮಾಡಿ ಮಹಾರಾಷ್ಟ್ರ ಸಚಿವ ಹಾಗೂ ಶಿವಸೇನಾ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಈಗ ಎಡವಟ್ಟು ಮಾಡಿಕೊಂಡಿದ್ದಾರೆ.
ಗುಲಾಬ್ ರಾವ್ ಹೀಗೆ ಹೇಳಿಕೆ ಕೊಟ್ಟಿದ್ದೇ ತಡ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಮಹಿಳಾ ಆಯೋಗವೂ ಸಿಟ್ಟಿಗೆದ್ದಿದೆ. ಅಷ್ಟೇ ಯಾಕೆ ಸಚಿವರು ಕ್ಷಮೆ ಕೇಳಲೇಬೇಕು ಅಂತಲೂ ಒತ್ತಾಯಿಸಿದೆ.
ಅಂದ್ಹಾಗೆ ಸಚಿವ ಗುಲಾಬ್ ರಾವ್ ಪಾಟೀಲ್ ಹೀಗೆ ಹೇಳೋಕೆ ಕಾರಣವೂ ಇದೆ. ವಿರೋಧ ಪಕ್ಷದವರೂ ಗುಲಾಬ್ ರನ್ನ ಟೀಕಿಸುತ್ತಲೇ ಇದ್ದಾರೆ. ಕ್ಷೇತ್ರಕ್ಕೇನೆ ಹೋಗೋದಿಲ್ಲ. ಅಲ್ಲಿ ಯಾವುದೇ ಕೆಲಸವನ್ನೂ ಮಾಡಿಸಿಯೇ ಇಲ್ಲ ಅಂತಲೇ ದೂರಿದ್ದಾರೆ. ಅವರಿಗೆ ಬಹಿರಂಗ ಸಭೆಯಲ್ಲಿ ಉತ್ತರ ಕೊಡುವ ಭರದಲ್ಲಿಯೇ ತಮ್ಮ ಕ್ಷೇತ್ರದ ರಸ್ತೆಗಳನ್ನ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿ ಈಗ ಯಡವಟ್ಟು ಮಾಡಿಕೊಂಡಿದ್ದಾರೆ.
PublicNext
20/12/2021 08:10 am