ಮುಂಬೈ: ಕುದಿಯುತ್ತಿರುವ ಕುಂದಾನಗರಿಯ ಸದ್ಯದ ಸ್ಥಿತಿ ಎಲ್ಲರಿಗೂ ತಿಳಿದಿದೆ. ಎಂಇಎಸ್ ಪುಂಡಾಟ, ಶಿವಸೇನೆ ಉದ್ಧಟತನದ ಬೆನ್ನಲ್ಲೇ ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಕರ್ನಾಟಕಕ್ಕೆ ಶಿವಸೈನಿಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಶಿವಸೇನೆ ಕಾನೂನು ಕೈಗೆತ್ತಿಕೊಂಡರೆ ಅದಕ್ಕೆ ಕರ್ನಾಟಕ ಸರ್ಕಾರವೇ ನೇರ ಹೊಣೆಯಾಗಲಿದೆ. ನಮ್ಮ ಕಾರ್ಯಕರ್ತರು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ಏಕನಾಥ ಶಿಂಧೆ ತಿಳಿಸಿದ್ದಾರೆ. ಇತ್ತ ಬೆಳಗಾವಿ ಹಿಂಸಾಚಾರದ ಬಗ್ಗೆ ಮಾತನಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ಎಂಇಎಸ್ ನಶಿಸಿ ಹೋಗುವ ಕಾಲ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸಿಎಂ ಹೇಳಿಕೆಗೆ ಸಚಿವ ಏಕನಾಥ್ ಶಿಂಧೆ, ಕಾನೂನು ಕ್ರಮಕ್ಕೆ ಮುಂದಾದರೆ ಕರ್ನಾಟಕ ಸರ್ಕಾರವೇ ಇರುವುದಿಲ್ಲ. ಶಿವಸೇನೆ ತಕ್ಕ ಪಾಠ ಕಲಿಸಲಿದೆ ಎಂದು ಬೆದರಿಕೆಯೊಡ್ಡಿದ್ದಾರೆ.
PublicNext
19/12/2021 05:50 pm