ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೇಪ್ ತಡೆಯಲು ಆಗದೇ ಇದ್ದರೇ ಮಲಗಿ ಎಂಜಾಯ್ ಮಾಡ್ಬೇಕು-ಸ್ಪೀಕರ್ ಕಾಗೇರಿ ಸ್ಥಿತಿಗೆ ರಮೇಶ್ ಕುಮಾರ್ ಕಾಮೆಂಟ್

ಬೆಳಗಾವಿ: ರೇಪ್ ಆದಾಗ ತಡೆಯಲು ಆಗದೇ ಇದ್ದರೆ ಮಲಗಿ ಎಂಜಯ್‌ ಮಾಡಬೇಕು ಅಂತಲೇ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಇಂದು ಸದನದಲ್ಲಿ ಸ್ಪೀಕರ್ ಕಾಗೇರಿ ಸ್ಥಿತಿಗೆ ಹೀಗೆ ಕೆಟ್ಟದಾಗಿ ಕಾಮೆಂಟ್ ಹೊಡೆದಿದ್ದಾರೆ. ಆದರೆ ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆಯೋ ಏನೋ.

ಅತಿವೃಷ್ಟಿ ಬಗ್ಗೆ ಸದನದಲ್ಲಿ ನಿಯಮ 69ರಡಿ ಚರ್ಚೆ ವೇಳೆ ರಮೇಶ್ ಕುಮಾರ್ ಹೀಗೆ ಮಾತನಾಡಿದ್ದಾರೆ. ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕೆಂದಿದ್ದರು ಸದಸ್ಯರು.ಆದರೆ ಸಂಜೆ 6 ಗಂಟೆವರೆಗೆ ಸಮಯ ಕೊಡುತ್ತೇನೆ ಎಂದಿದ್ದರು ಸ್ಪೀಕರ್ ಕಾಗೇರಿ. ಆದರೂ ಸದನದಲ್ಲಿ ಯಾರೂ ಸ್ಪೀಕರ್ ಮಾತು ಕೇಳದೇ ಸದ್ದು-ಗದ್ದಲ ಮಾಡ್ತಾನೇ ಇದ್ದರು.

ಈ ಒಂದು ಸಮಯದಲ್ಲಿ ಕಾಗೇರಿ 'ಈಗ ನನ್ನ ಪರಿಸ್ಥಿತಿ ಹೇಗಾಗಿದೇ ಅಂದ್ರೆ ಏನೂ ಹೇಳೋ ಹಾಗಿಲ್ಲ. ಯಾರಿಗೂ ಹೇಳೋ ಹಾಗಿಲ್ಲ. ಸುಮ್ನೆ ನೋಡೋದು ಎಂಜಾಯ್ ಮಾಡೋದು ಅಂತಲೇ ಹೇಳ್ತಾರೆ.

ಆದರೆ ಇದಕ್ಕೆ ಪ್ರತಿಯಾಗಿ ಕೈ ಶಾಸಕ ರಮೇಶ್ ಕುಮಾರ್, ರೇಪ್ ಅನ್ನ ತಡೆಯೋಕೆ ಆಗದೇ ಇದ್ದರೇ ಅದನ್ನ ಮಲಗಿ ಎಂಜಾಯ್ ಮಾಡಬೇಕು ಅಂತಲೇ ಹೇಳ್ತಾರೆ. ಇದನ್ನ ಕೇಳಿದ ಕಾಗೇರಿ ಅವ್ರು ಎಲ್ಲವೂ ಅರ್ಥ ಆಯಿತು ಬಿಡಿ ಅಂತಲೇ ನಕ್ಕು ಸುಮ್ಮನಾಗಿ ಬಿಡ್ತಾರೆ.

Edited By : Shivu K
PublicNext

PublicNext

16/12/2021 09:58 pm

Cinque Terre

101.4 K

Cinque Terre

27

ಸಂಬಂಧಿತ ಸುದ್ದಿ