ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಿದೆ. ಇಂದು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತಾ, ಟ್ರ್ಯಾಕ್ಟರ್ ಏರಿ ಬೆಳಗಾವಿಯ ಸುವರ್ಣ ಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರನ್ನು, ಪೊಲೀಸರು ಗೇಟ್ ಬಳಿಯಲ್ಲಿಯೇ ತಡೆದಿದ್ದರು.
ಈ ವೇಳೆ ವಿರೋಧ ಪಕ್ಷದವರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಟ್ರ್ಯಾಕ್ಟರ್ ನಲ್ಲಿ ಬಂದವರಿಗೆ ಸುವರ್ಣ ಸೌಧದ ಒಳಗೆ ಪ್ರವೇಶಿಸಲು ಅನುಮತಿ ನೀಡಿದರು. ಇದಾದ ಬಳಿಕ ಸುವರ್ಣ ಸೌಧದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಡಿ.ಕೆ ಅಲ್ಲ ಕೇಡಿ ಎಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ಕೊಟ್ಟಿದ್ದಾರೆ.
ಅವ್ನು ಸಿ.ಟಿ.ರವಿ ಅಲ್ಲ, ಆತ ಲೂಟಿ ರವಿ. ಅವರ ಬಗ್ಗೆ ನಮಗಿಂತ ಚಿಕ್ಕಮಗಳೂರಿನಲ್ಲಿ ಕೇಳಿ. ಅವರಿಗೆ ಗೊತ್ತು. ಸ್ವಲ್ಪ ಎಚ್ಚುಕಮ್ಮಿಯಾಗಿದ್ರೇ.. ಅವರ ಮತ್ತೊಂದು ಮುಖ ಗೊತ್ತಾಗ್ತಾ ಇತ್ತು ಎಂದು ಕಿಡಿಕಾರಿದರು. ನನ್ನ ಮೇಲೆ ಆರೋಪ ಮಾಡಿಬಿಟ್ರೆ ದೊಡ್ಡ ಲೀಡರ್ ಆಗಿಬಿಡುತ್ತೇನೆ ಎಂದುಕೊಂಡಿದ್ದಾನೆ ಆ ಲೂಟಿ ರವಿ ಎಂದು ಗುಡುಗಿದ್ದಾರೆ.
PublicNext
16/12/2021 07:21 pm