ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿಯೇ ಮಾಡುತ್ತೇವೆ - ಆರಗ ಜ್ಞಾನೇಂದ್ರ

ಬೆಳಗಾವಿ: ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿಯೇ ಮಾಡುತ್ತೇವೆ.ವಿಧೇಯಕ ಮಂಡನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ,ಯಾರೇ ವಿರೋಧ ಮಾಡಿದ್ರೂ ಕಾಯ್ದೆ ಜಾರಿಗೆ ಮಾಡ್ತೀವಿ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ‌.

ಬಲವಂತವಾಗಿ ಮತಾಂತರ ಮಾಡುವುದು ತಪ್ಪು, ಅಂತಹವರಿಗೆ ‌ಕಠಿಣ ಶಿಕ್ಷೆಯಾಗಲೇಬೇಕು ಸಂವಿಧಾನದ 25 ನೇ ಕಾಲಂ ಅಡಿಯಲ್ಲಿ ಯಾವ ವ್ಯಕ್ತಿ ಯಾವ ಧರ್ಮದಲ್ಲಿ ಜನಿಸಿರುತ್ತಾನೆ ಅದರಲ್ಲಿಯೇ ಇರಬೇಕು ಆಮಿಷ ಮತ್ತು ಬಲವಂತದ ಮತಾಂತರ ಆಗಬಾರದಂತಿದೆ.

ಬಲವಂತವಾಗಿ ಮತಾಂತರ ಮಾಡಿದರೆ ಏನು ಮಾಡಬೇಕು ಎಂಬುವುದು ಕಾನೂನಲ್ಲಿ ಇಲ್ಲ ಅದನ್ನ ಈ ಅಧಿವೇಶನಲ್ಲಿ ಮಂಡನೆ ಮಾಡುತ್ತೇವೆ. ಬಲವಂತವಾಗಿ ಮತಾಂತರ ಮಾಡುವವರಿಗೆ ಶಿಕ್ಷೆ ಆಗಲೇಬೇಕು ಎಂದು ಗೃಹಸಚಿವರು ನುಡಿದಿದ್ದಾರೆ.

Edited By : Nagesh Gaonkar
PublicNext

PublicNext

15/12/2021 09:15 pm

Cinque Terre

110.1 K

Cinque Terre

10

ಸಂಬಂಧಿತ ಸುದ್ದಿ