ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕೆಟ್ಟ ನಿರ್ಧಾರಗಳಿಂದ ಜೆಡಿಎಸ್‌ಗೆ ಕೆಟ್ಟ ಪರಿಸ್ಥಿತಿ ಬಂದಿದೆ'

ಬೆಂಗಳೂರು: ಕೆಟ್ಟ ನಿರ್ಧಾರಗಳಿಂದ ಜೆಡಿಎಸ್‌ಗೆ ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ವೈಎಸ್​ವಿ ದತ್ತ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಗೆದ್ದಿರಬಹುದು ಜಾಸ್ತಿ ಸ್ಥಾನ ಗೆದ್ದಿದ್ದೀವಿ ಅಂತ ಬೀಗುತ್ತಿದ್ದಾರೆ. ಆದರೆ ಇದು ಬಿಜೆಪಿ ಪ್ರಯಾಸದ ಗೆಲುವಾಗಿದೆ. ಜಾತ್ಯಾತೀತ ಮತಗಳು ಕ್ರೋಢೀಕರಣವಾದರೆ ಬಿಜೆಪಿಗೆ ಹೊಡೆತ ಬೀಳುತ್ತದೆ. ಜಾತ್ಯಾತೀತ ಜನರು ಬಿಜೆಪಿ ವಿರೋಧ ಮಾಡುತ್ತಿದ್ದಾರೆ ಎಂಬುದಕ್ಕೆ ಫಲಿತಾಂಶ ಮುನ್ನೆಚ್ಚರಿಕೆ ಎನ್ನೋದಂತೂ ಸತ್ಯ ಎಂದರು.

ಜೆಡಿಎಸ್ ಪ್ರದರ್ಶನ ಹೀನಾಯವಾಗಿದೆ ಅನ್ನೋದು ಎಲ್ಲ ಮಾಧ್ಯಮಗಳಲ್ಲಿ ಬಂದಿದೆ. ಅದಕ್ಕೆ ಕಾರಣ ನಮ್ಮ ಪಕ್ಷದಲ್ಲಿ ದ್ವಂದ್ವ ನಿಲುವು, ಸ್ಪಷ್ಟತೆಯ ಕೊರತೆ. ನಿಲುವಿನ ಒಳಗಡೆ ಏಕತಾನತೆ ಇಲ್ಲದೆ ಹೊಯ್ದಾಟವಿದೆ. ಸ್ಪಷ್ಟ ನಿಲುವು ತೆಗೆದುಕೊಳ್ಳುವಲ್ಲಿ ಎಡವಿರುವುದು ತುಂಬ ಹೊಡೆತ ಕೊಟ್ಟಿದೆ. ಹೀಗಾಗಿ ಜೆಡಿಎಸ್ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡುವ ತೀರ್ಮಾನ ಮಾಡಿಲ್ಲ. ಅದನ್ನು ಮಾಡಬೇಕಿದೆ ಎಂದು ವೈಎಸ್‌ವಿ ದತ್ತ ಹೇಳಿದ್ದಾರೆ.

Edited By : Shivu K
PublicNext

PublicNext

15/12/2021 06:44 pm

Cinque Terre

69.55 K

Cinque Terre

14

ಸಂಬಂಧಿತ ಸುದ್ದಿ