ಬೆಳಗಾವಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಎರಡು ದಿನ ವಿಶೇಷ ಚರ್ಚೆ ಮಾಡ್ಬೇಕು ಎಂದು ಸ್ಪೀಕರ್ ಗೆ ಮನವಿ ಮಾಡಿದ್ದೇನೆ, ಇದಕ್ಕೆ ಸಿಎಂ ಸಹ ಸಹಮತ ವ್ಯಕ್ತಪಡಿಸಿದ್ದಾರೆ, ಈ ಬಗ್ಗೆ ಸುದೀರ್ಘ ಚರ್ಚೆಯಾಗುತ್ತಿದೆ ಎಂದು ನಗರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಹಾಗೇ ಬೆಳಗಾವಿ ಮತ್ತು ಮೈಸೂರಿನಲ್ಲಿ ಪರಿಷತ್ ನಮ್ಮ ಪರ ಅಗುತ್ತೆ ಎಂದು ಅಂದುಕೊಂಡಿದ್ವಿ, ಅದ್ರೆ ಬೆಳಗಾವಿಯಲ್ಲಿ ಸೋತಿದ್ದರ ಬಗ್ಗೆ ಸುದೀರ್ಘ ಚರ್ಚೆಯಾಗಬೇಕಿದೆ,ಇಷ್ಟು ಜನ ಎಂಎಲ್ಎ, ಎಂಪಿ ಇದ್ದು ಗೆಲ್ಲೋದಕ್ಕೆ ಅಗಲಿಲ್ಲ.ಈಗಾಗಲೇ ಮುಖ್ಯಮಂತ್ರಿ ಸಹ ಈ ಬಗ್ಗೆ ಮಾತನಾಡಿದ್ದಾರೆ. ಏನಾಗಿದೆ ಅನ್ನೋದರ ಬಗ್ಗೆ ಚರ್ಚಿಸಿ ಈ ಬಗ್ಗೆ ತಿರ್ಮಾನ ಮಾಡ್ತೀವಿ ಎಂದು ಬಿಎಸ್ ವೈ ಅಭಿಪ್ರಾಯಪಟ್ಟಿದ್ದಾರೆ.
PublicNext
15/12/2021 11:51 am