ಬೆಳಗಾವಿ: ವಿಧಾನಸಭೆ ಕಲಾಪಕ್ಕೆ ಗೈರಾದ ಶಾಸಕರ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿ, ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಶಾಸಕರು ಸದನಕ್ಕೆ ಬರಲೇಬೇಕು. ಇಡೀ ವರ್ಷದಲ್ಲಿ ಒಟ್ಟಾರೆ 30-40 ದಿನ ಮಾತ್ರ ಅಧಿವೇಶನ ನಡೆಸುತ್ತೇವೆ. ಅದಕ್ಕೂ ಗೈರು ಹಾಜರಾಗೋದು ಸರಿಯಲ್ಲ ಎಂದು ಸ್ಪೀಕರ್ ಕಾಗೇರಿ ಅವರ ಅಸಮಾಧಾನ ಹೊರ ಹಾಕಿದರು. ಜೊತೆಗೆ, ಶಾಸಕರ ಹಾಜರಾತಿ ಹೆಚ್ಚಾಗಬೇಕಿದೆ. ಹೀಗಾಗಿ ಕಲಾಪಲಕ್ಕೆ ಹಾಜರಾದ ಶಾಸಕರ ಸಂಖ್ಯೆ ಪ್ರಕಟಿಸುತ್ತಿದ್ದೇನೆ. ನಿನ್ನೆ ಕಲಾಪಕ್ಕೆ 119 ಶಾಸಕರು ಹಾಜರ್ ಆಗಿದ್ದರು ಎಂದು ಮಾಹಿತಿ ನೀಡಿದರು.
ಇವತ್ತಿನ ಕಲಾಪಕ್ಕೂ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೈರಾಗಿದ್ದಾರೆ. ನಿನ್ನೆ ವಿಧಾನಸಭೆ ಕಲಾಪಕ್ಕೆ 105 ಶಾಸಕರು ಗೈರಾಗಿದ್ದರು. ಎರಡನೇ ದಿನದ ಕಲಾಪದಲ್ಲೂ ಸದಸ್ಯರ ಗೈರು ಹಾಜರಿಯೇ ಹೆಚ್ಚಾಗಿದೆ. ಬಿಜೆಪಿಯಿಂದ-50, ಕಾಂಗ್ರೆಸ್ನಿಂದ-25, ಜೆಡಿಎಸ್ನಿಂದ-12 ಸದಸ್ಯರು ಮಾತ್ರ ಹಾಜರಿದ್ದರು.
PublicNext
14/12/2021 06:05 pm