ಪಣಜಿ: ನಾನು ಮೊದಲು ಮನುಷ್ಯಳು, ಬ್ರಾಹ್ಮಣ. ಇದಕ್ಕಾಗಿ ನಾನು ಬಿಜೆಪಿಯಿಂದ ಕ್ಯಾರೆಕ್ಟರ್ ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಗೋವಾದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಗಂಗಾಸ್ನಾನವನ್ನು ಮಾಡುತ್ತಾರೆ. ಆದರೆ ಕೋವಿಡ್‌ನಿಂದ ಸಾವನ್ನಪ್ಪಿದ ನಿಮ್ಮ ಪ್ರೀತಿಪಾತ್ರರ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಎಸೆಯಲು ಬಿಡದಿರಲು ಅದೇ ಜನರು (ಬಿಜೆಪಿಯವರು) ಜವಾಬ್ದಾರರು ಎಂದು ವಾಗ್ದಾಳಿ ನಡೆಸಿದ್ದಾರೆ.
ಗೋವಾದಲ್ಲಿ ಬಿಜೆಪಿಯನ್ನು ಕೊನೆಗೊಳಿಸಬೇಕೆಂದು ನಾವು ಬಯಸುತ್ತೇವೆ. ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಂದಾಗಬೇಕಾಗಿದೆ. ನಾನು ನಿಮ್ಮನ್ನು ಎದುರಿಸಲು ಬಂದಿಲ್ಲ, ಗೋವನ್ನು ಹೊರಗಿನವರು ನಿಯಂತ್ರಿಸುವುದು ನನಗೆ ಇಷ್ಟವಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
PublicNext
14/12/2021 05:45 pm