ಚಿಕ್ಕೋಡಿ: ಪರಿಷತ್ ಚುನಾವಣೆಯ ಗೆಲುವಿನ ಬಳಿಕ ಮಾಧ್ಯಮಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ, ನನ್ನನ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಎಲ್ಲಾ ನಾಯಕರಿಗೂ ಧನ್ಯವಾದಗಳು, ಎಲ್ಲರೂ ಸಹ ಒಗ್ಗಟ್ಟಿನಿಂದ ಚುನಾವಣೆ ನಡೆದಿದೆ,ಇಲ್ಲಿ ಕುಟುಂಬದ ಪ್ರತಿಷ್ಠೆ ಎನ್ನುವುದಕ್ಕಿಂತಲೂ ಪಕ್ಷ ಗೆದ್ದಿದೆ ಎಂದು ಚನ್ನರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ನಮಗೆ ಬೇಕಾದಷ್ಟು ನಂಬರ್ಸ್ ಇದೆ ಅಂತ ಸತೀಶ್ ಜಾರಕಿಹೊಳಿ ಮೊದಲೇ ಹೇಳಿದ್ದರು, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಅವರ ಟೀಂ ವರ್ಕ್ ಇಲ್ಲಿ ಕೆಲಸ ಮಾಡಿದೆ, ಎಲ್ಲಾ ಮತದಾರರಿಗೂ ಸಹ ನಾನು ಧನ್ಯವಾದಗಳನ್ನ ತಿಳಿಸುತ್ತೇನೆ, ಮುಂಬರುವ ವಿಧಾನಸಭೆ ಚುನಾವಣೆಗೆ ಈ ಚುನಾವಣೆಯೇ ಒಂದು ನಿದರ್ಶನ ಎಂದು ಗೆಲುವಿನ ಖುಷಿಯನ್ನು ಚನ್ನರಾಜ್ ಹಟ್ಟಿಹೊಳಿ ಹಂಚಿಕೊಂಡರು.
PublicNext
14/12/2021 04:39 pm