ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬರೀ ಮಕ್ಳು, ಮೊಮ್ಮಕ್ಳು ಆಗ್ಬಿಟ್ರೇ ಪಾರ್ಟಿ ಏನಾಗಬೇಕು?'

ಬೆಂಗಳೂರು: ಬರೀ ಮಕ್ಕಳು, ಮೊಮ್ಮಕ್ಕಳು ಆಗ್ಬಿಟ್ರೇ ಪಾರ್ಟಿ ಏನಾಗಬೇಕು. ಕುಟುಂಬದವರೆಲ್ಲಾ ಎಂಎಲ್​ಎ, ಎಂಪಿಗಳಾದರೇ ಜೆಡಿಎಸ್ ಪಕ್ಷವು ಎಚ್‌.ಡಿ.ದೇವೇಗೌಡರ ಪ್ಯಾಮಿಲಿ ಆಗಿಬಿಡುತ್ತೆ ಅಷ್ಟೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ರೀತಿ ವಂಶ ಪಾರಂಪರ್ಯ ಬಿಜೆಪಿಯಲ್ಲಿ ನಡೆಯುವುದಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಇನ್ನೂ 100 ದಿನ ಆಗಿದೆ ಅಷ್ಟೇ. ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ‌ ಇಲ್ಲ. ಮತ್ತೆ ಸಿಎಂ ಬದಲಾವಣೆ ಕಾಂಗ್ರೆಸ್ ಹಬ್ಬಿಸುತ್ತಿರುವ ಸುದ್ದಿ. ನಾನು ಸಿಎಂ ಆದರೆ ರಾಜ್ಯದ ಇತಿಹಾಸವೇ ಬದಲಾಗುತ್ತೆ ಎಂದು ಹೇಳಿದರು.

ಭ್ರಷ್ಟಾಚಾರ ಈಗ ಕಡಿಮೆ ಆಗುತ್ತಿದೆ. ಸೂಪರ್ ಸಿಎಂ ಇದ್ದಾಗ ಭ್ರಷ್ಟಾಚಾರ ಇತ್ತು. ಈಗ ಆ ಪ್ರಮಾಣದಲ್ಲಿ ಇಲ್ಲ. ಪಿಎಂಗೆ ಪತ್ರ ಬರೆದಾಗ ಸಿಎಂ ಯಾರ್ ಆಗಿದ್ದರು, ಈಗ ಯಾರಾದ್ರೂ ಪತ್ರ ಬರೆದಿದ್ದಾರಾ ಎಂದು ಕೇಳುವ ಮೂಲಕ ಪ್ರಸ್ತುತ ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆ ಎಂಬುದನ್ನು ತಿಳಿಸುವ ಪ್ರಯತ್ನ ನಡೆಸಿದ್ದಾರೆ.

Edited By : Vijay Kumar
PublicNext

PublicNext

14/12/2021 03:16 pm

Cinque Terre

28.74 K

Cinque Terre

0

ಸಂಬಂಧಿತ ಸುದ್ದಿ