ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಸದೆ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತ ಸಿಎಂ-ನೆಟ್ಟಿಗರು ಗರಂ

ಬೆಳಗಾವಿ:ಸಂಸದೆ ಮಂಗಲಾ ಅಂಗಡಿ ಅವ್ರು ಮನವಿ ಸಲ್ಲಿಸಲು ಬಂದಾಗ, ಸಿಎಂ ಬಸವರಾಜ್ ಬೊಮ್ಮಾಯಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ಅಗೌರವ ತೋರಿದ್ದಾರೆ ಎಂದು ಸಿಎಂ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಸಂಸದೆ ಮಂಗಲಾ ಅಂಗಡಿ ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಮೀಟ್ ಆದರು. ಕಿತ್ತೂರು -ಧಾರವಾಡ ರೈಲು ಮಾರ್ಗ ಶೀಘ್ರವೇ ಆರಂಭವಾದರೆ ಜನರಿಗೆ ಅನುಕೂಲವಾಗುತ್ತದೆ ಅಂತ ಮನವಿ ಸಲ್ಲಸಿದರು.

ಆದರೆ ಮನವಿ ಸ್ವೀಕರಿಸುವಾಗ ಸಿಎಂ ಬೊಮ್ಮಾಯಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು. ಈ ಸಮಯದಲ್ಲಿ ಸಂಸದೆ ಮಂಗಲಾ ಅಂಗಡಿ ನಿಂತುಕೊಂಡೇ ಇದ್ದರು. ತಮ್ಮ ಈ ಭೇಟಿಯ ಫೋಟೋವನ್ನ ಸ್ವತಃ ಮಂಗಲಾ ಅಂಗಡಿ ಫೇಸ್ ಬುಕ್ ಪೇಜ್‌ ನಲ್ಲೂ ಹಂಚಿಕೊಂಡಿದ್ದಾರೆ. ಅದನ್ನ ಕಂಡ ನೆಟ್ಟಿಗರು ಈಗ ಸಿಎಂ ನಡುವಳಿಕೆಯನ್ನ ಮನಸೋಯಿಚ್ಛೆ ಟೀಕಿಸಿದ್ದಾರೆ.

Edited By :
PublicNext

PublicNext

13/12/2021 08:23 pm

Cinque Terre

47.45 K

Cinque Terre

15

ಸಂಬಂಧಿತ ಸುದ್ದಿ