ಪಾಟ್ನಾ: ರಾಜಕೀಯ ಅಂದ್ರೇನೆ ಹಾಗೆ. ಇಲ್ಲಿ ಏನ್ ಬೇಕಾದ್ರೂ ಆಗಬಹುದು. ಮತದಾರನಿಗೆ ವೋಟ್ ಹಾಕಲು ದುಡ್ಡು ಕೊಟ್ಟು ಖರೀದಿನೂ ಮಾಡಬಹುದು. ಆದರೆ ಇಲ್ಲೊಬ್ಬ ರಾಜಾಕೀಯ ವ್ಯಕ್ತಿ ಎಲೆಕ್ಷನ್ ಸೋತಿದ್ದೇ ತಡ. ತನಗೆ ಮತ ಹಾಕದೇ ಇರೋ ಯುವಕರಿಗೆ ಅಮಾನವೀಯ ಶಿಕ್ಷೆ ಕೊಟ್ಟಿದ್ದಾನೆ.
ಬಿಹಾರದ ಔರಂಗಾಬಾದ್‌ನಲ್ಲಿಯೇ ಈ ಘಟನೆ ನಡೆದಿದೆ. ಚುನಾವಣೆಯಲ್ಲಿ ಗೆಲ್ಲಲೇಬೇಕು ಅಂತ ಸಾಕಷ್ಟು ದುಡ್ಡು ಹಂಚಿದ್ದ ಬಲವಿಂದರ್ ಸಿಂಗ್ ಅನ್ನೋ ಅಭ್ಯರ್ಥಿ. ಆದರೆ ಸೋತ ಕೂಡಲೇ ಅದೇ ಸಿಟ್ಟಿನಲ್ಲಿಯೇ ತನಗೆ ವೋಟ್ ಹಾಕದೇ ಇರೋ ಅನಿಲ್ ಕುಮಾರ್ ಮತ್ತು ಮಂಜೀತ್ ಕುಮಾರ್ ಅನ್ನೋ ಯುವಕರಿಂದ ಬಲವಿಂದರ್ ಸಿಂಗ್, ರಸ್ತೆಯಲ್ಲಿಯೇ ಬಸ್ಕಿ ಹೊಡೆಸಿದ್ದಾನೆ. ರಾಜಕಾರಣಿ.
ಇಷ್ಟೇ ಆಗಿದ್ದರೇ ಪರವಾಗಿಲ್ಲ ಅನ್ಬಹುದೇನೋ. ಆದರೆ ರಸ್ತೆ ಮೇಲೆ ಉಗುಳಿದ ತನ್ನ ಎಂಜಲನ್ನ ನೆಕ್ಕಲು ಹೇಳಿ ಬಲವಿಂದರ್ ಸಿಂಗ್ ಅಮಾನವೀಯತೆ ಮೆರದಿದ್ದಾನೆ. ಈ ಕಾರಣಕ್ಕೇನೆ ರಾಜಕಾರಣಿ ಬಲವಿಂದರ್ ಸಿಂಗ್ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ನೆಟ್ಟಿಗರಂತೂ ವೀಡಿಯೋ ಕಂಡು ಕೆಂಡಕಾರಿದ್ದಾರೆ.
PublicNext
13/12/2021 07:43 pm