ಬೆಳಗಾವಿ : ಇಂದಿನಿಂದ 10 ದಿನಗಳವರೆಗೆ ಬೆಳಗಾವಿ ಯಲ್ಲಿ ಚಳಿಗಾಲದ ಅಧಿವೇಶನವನ್ನು ಸರಕಾರ ನಡೆಸುತ್ತಿರುವುದು ಒಂದು ಕಡೆಯಾದ್ರೆ ಸುವರ್ಣ ಸೌಧ ಎದುರು ಹೋರಾಟಗಳ ಬಿಸಿ ಸರಕಾರಕ್ಕೆ ತಟ್ಟಿದೆ. ಅದರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಕುರಿತು ಒಂದು ವರದಿ ಇಲ್ಲಿದೆ...
ಹೀಗೆ ಸೇರಿದ ರೈತರು ಹಸಿರು ಟವಲ್ ಮೆಲೆ ಹಾರಾಸ್ತಾ ಇರೋ ರೈತರು ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಯನ್ನ ವಾಪಸ್ಸು ಪಡೆದುಕ್ಕೊಂಡ್ರೆ ರಾಜ್ಯ ಸರಕಾರ ವಾಪಸ್ಸು ಪಡೆದುಕ್ಕೊಳ್ಳಲೂ ಮೊಂಡು ಪ್ರದರ್ಶನವನ್ನ ಮಾಡ್ತಾ ಇದಾರೆ. ಇನ್ನು ಬೆಳಗ್ಗೆ 10 ಘಂಟೆಗೆ ಹಿರೆಬಾಗೇವಾಡಿ ಟೋಲ್ ಬಳಿ ರೈತರು ಜಮಾವಣೆ ಯಾಗಿ ಪಾದಯಾತ್ರೆ ಆರಂಭ ಮಾಡಬೇಕು ಅನ್ನುವಷ್ಟರಲ್ಲಿ ಫೊಲಿಸರನ್ನು ಬಸ್ ನಲ್ಲಿ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಪ್ರತಿಬಟನಾ ಸ್ಥಳಕ್ಕೆ ಕರೆದುಕೊಂಡು ಬಂದರು. ಆದರೆ ರೈತರ ಹೋರಾಟ ಮತ್ತೆ ಜೋರಾಯ್ತು. ಇನ್ನೂ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ
ರೈತರ ಬೇಡಿಕೆಗಳನ್ನ ರಾಜ್ಯ ಸರಕಾರ ಈಡೇರಿಸಬೇಕು ಎಂದು ಪಟ್ಟು ಹಿಡಿದರು.
ಇನ್ನೂ ಮಧ್ಯಾಹ್ನ 3 ಘಂಟೆಗೆ ಸರಕಾರದ ಪ್ರತಿನಿಧಿಗಳಾದ ಸಚಿವ ಬೈರತಿ ಬಸವರಾಜ್ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಆಗಿಮಿಸಿ ರೈತರ ಮೊನವೊಲಿಸಲು ಬಂದಿದ್ದರು. ಆದರೆ ಸರಕಾರ ಭರವಸೆಯನ್ನು ಕೊಡೊವರೆಗೂ ನಾವು ಪ್ರತಿಭಟನೆ ಹಿಂಪಡೆಯಲ್ಲ ಎಂದು ರೈತರು ಹೇಳಿದ ಬಳಿಕ ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ಸಚಿವರುಗಳು ರೈತರು ಅಹವಾಲು ಸ್ವಿಕರಿಸಿ ಸಿಎಂ ಜೊತೆ ನಾವು ಮಾತನಾಡುತ್ತೆವೆ, ಅವರು ಇವತ್ತು ಇಲ್ಲ ಅವರು ಕಾಶಿಗೆ ಹೋಗಿದ್ದಾರೆ ಅವರು ಬಂದ ಮೇಲೆ ಚರ್ಚೆ ಮಾಡಿ ರೈತರ ಬೇಡಿಕೆಗಳನ್ನ ಇಡೇರಿಸಲಾಗುತ್ತೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
PublicNext
13/12/2021 07:42 pm