ಬೆಂಗಳೂರು: ಇಂದಿರಾ ಗಾಂಧಿ ಒಬ್ಬ ದಿಟ್ಟ ಮಹಿಳೆಯಾಗಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದಿದ್ದ ಯುದ್ಧದ ವೇಳೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದಿಟ್ಟ ನಿಲುವುಗಳನ್ನು ತಳೆದಿದ್ದರು. ಇದನ್ನು ನಾವು ಸ್ಮರಿಸಲೇಬೇಕು’ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.
ಸುಧೀರ ಸಾಗರ್ ಬರೆದ ‘ಆ ಹದಿಮೂರು ದಿನಗಳು (1971 ಭಾರತ–ಪಾಕಿಸ್ತಾನ ಯುದ್ಧದ ರೋಚಕ ಕಥೆಗಳು)’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಬಳಿ ಎಂತದ್ದೇ ಶಕ್ತಿಶಾಲಿ ಯುದ್ಧೋಪಕರಣ ಕ್ಷಿಪಣಿ ಅಥವಾ ರಫೇಲ್ ಯುದ್ಧ ವಿಮಾನ ಇರಬಹುದು. ಆದ್ರೆ ಅದೆಲ್ಲದಕ್ಕಿಂತ ದೊಡ್ಡ ಆಯುಧವೆಂದರೆ ಅದು ನಮ್ಮೊಳಗಿರುವ ದೇಶಪ್ರೇಮ. ದೇಶಪ್ರೇಮವೇ ದೊಡ್ಡ ಆಯುಧ. ಇದನ್ನು ನಾವು ಮರೆಯಬಾರದು ಎಂದು ಪ್ರಕಾಶ್ ಬೆಳವಾಡಿ ಹೇಳಿದರು.
PublicNext
13/12/2021 02:19 pm